ಎರಡನೇ ಮದುವೆ ಸಂಭ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್-ಕಹಳೆ ನ್ಯೂಸ್
ಸ್ಯಾಂಡಲ್‌ವುಡ್‌ನ ಚೆಂದದ ನಿರೂಪಕಿ ಚೈತ್ರಾ ವಾಸುದೇವನ್ ಇದೀಗ ಎರಡನೇ ಮದುವೆ ಸಂಭ್ರಮದಲ್ಲಿದ್ದಾರೆ. ಕಳೆದ ತಿಂಗಳಷ್ಟೇ ಜಗದೀಪ್ ಎಂಬುವವರ ಜತೆಗೆ ಎರಡನೇ ಮದುವೆ ಆಗುವ ಬಗ್ಗೆ ಪೋಟೋ ಶೇರ್ ಮಾಡಿ, ಭಾವಿ ಪತಿಯನ್ನು ಪರಿಚಯಿಸಿದ್ದರು ಚೈತ್ರಾ. ಇದೀಗ ಸದ್ದಿಲ್ಲದೆ ಮದರಂಗಿ ಶಾಸ್ತ್ರ ಮುಗಿಸಿಕೊಂಡಿದ್ದಾರೆ. ತಮ್ಮ ನಿರೂಪಣೆಯಿಂದಲೇ ಕನ್ನಡಿಗರ ಮತ್ತು ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ಚೈತ್ರಾ ವಾಸುದೇವನ್, ಎರಡನೇ ಮದುವೆಯ ಸಂಭ್ರಮದಲ್ಲಿದ್ದಾರೆ. ಮೆಹಂದಿ ಶಾಸ್ತ್ರದ ಫೋಟೋಗಳನ್ನು ಶೇರ್ ಮಾಡಿದ್ದಾರೆ. 2023ರಲ್ಲಿ ಮೊದಲ...