Recent Posts

Friday, November 22, 2024

ಬೆಂಗಳೂರು

ಕ್ರೈಮ್ಬೆಂಗಳೂರುಸುದ್ದಿ

ಸುಂದರಿ ಕರೆದಳು ಅಂತಾ ಹೋಗಿ ಬೆತ್ತಲಾದ ಉದ್ಯಮಿ ; ವೀಡಿಯೋ ಮಾಡಿಟ್ಟುಕೊಂಡು 40 ಲಕ್ಷ ಸುಲಿಗೆ ಮಾಡಿದ ಹನಿಟ್ರ್ಯಾಪ್ ಗ್ಯಾಂಗ್ – ಕಹಳೆ ನ್ಯೂಸ್

ಬೆಂಗಳೂರು: ಉದ್ಯಮಿಯೊಬ್ಬರು ಹನಿಟ್ರ್ಯಾಪ್‌ ಗ್ಯಾಂಗ್‌ನ ಖೆಡ್ಡಗೆ ಬಿದ್ದು 40 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಮಹಿಳೆ ಸಿನಿಮಾ‌ ಮಾಡೋಣ, ನಾನು ಅದೇ ಫೀಲ್ಡ್‌ನಲ್ಲಿದ್ದೇನೆ ಎಂದು ಸುಳ್ಳು ಹೇಳಿ ಉದ್ಯಮಿ ಸ್ನೇಹ ಮಾಡಿದ್ದಳು. ಇದಾದ ಕೆಲ ದಿನಗಳ‌ ನಂತರ ನಮ್ಮ ಡೈರೆಕ್ಟರ್‌ಗೆ ಹಣದ ಕಷ್ಟ ಇದೆ ಎಂದು ಹೇಳಿ ಉದ್ಯಮಿಯಿಂದ ನಾಲ್ಕು ಲಕ್ಷ ಹಣ ಪಡೆದಿದ್ದಾಳೆ. ನಂತರ ಹಣ ವಾಪಸ್ ಕೇಳಿದಾಗ ತನ್ನ ರೂಮಿಗೆ ಕರೆಸಿಕೊಂಡು ಬಲವಂತವಾಗಿ...
ಬೆಂಗಳೂರುಸಿನಿಮಾಸುದ್ದಿ

“ಮೂವರು ಇದ್ದೀವಿ, ನಮ್ಮ ಜೊತೆ ಟ್ರಿಪ್‌ಗೆ ಬಾ ಹೀರೋಯಿನ್ ಮಾಡುತ್ತೇವೆ”; ಚೈತ್ರಾ ಆಚಾರ್ ಯಾರ ಬಗ್ಗೆ ಹೇಳಿದ್ದು? – ಕಹಳೆ ನ್ಯೂಸ್

ಹೇಮಾ ಕಮಿಟಿ ವರದಿ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತಿದೆ. ನಟಿಯರು ಮುಂದೆ ಬಂದು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಲಯಾಳಂ ಚಿತ್ರರಂಗದಂತೆಯೇ ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಇಂತಹದ್ದೇ ಕಮಿಟಿ ಬೇಕು ಅನ್ನುವ ಒತ್ತಾಯ ಹೆಚ್ಚಾಗಿದೆ. ಅದರಲ್ಲೂ ಕನ್ನಡ ಚಿತ್ರರಂಗದಲ್ಲೂ ಇಂತಹದ್ದೊಂದು ಹೇಮಾ ಕಮಿಟಿಯಂತಹದ್ದೇ ಸಮಿತಿ ಇಲ್ಲೂ ರಚನೆ ಆಗಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಈ ಸಂಬಂಧ ಸಿಎಂ ಸಿದ್ಧರಾಮಯ್ಯ...
ಬೆಂಗಳೂರುಮೈಸೂರುರಾಜಕೀಯರಾಜ್ಯಸುದ್ದಿ

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ; ಸರ್ಕಾರದಿಂದ ವಿವರ ಕೋರಿದ ರಾಜ್ಯಪಾಲರು – ಕಹಳೆ ನ್ಯೂಸ್

ಕರ್ನಾಟಕದಲ್ಲಿ ರಾಜ್ಯಪಾಲರು ಹಾಗೂ ಕಾಂಗ್ರೆಸ್ ಸರ್ಕಾರದ ನಡುವಣ ಜಟಾಪಟಿ ಜೋರಾಗಿದೆ. ಮುಡಾ ಹಗರಣದ ಪ್ರಾಸಿಕ್ಯೂಷನ್​​ ಅನುಮತಿಯಿಂದ ಆರಂಭವಾದ ಜಿದ್ದಾಜಿದ್ದಿ ಹಲವು ಆಯಾಮಗಳಿಗೆ ಹೊರಳಿದೆ. ಇದೀಗ ಮುಡಾ ಸಂಬಂಧ ಸಲ್ಲಿಕೆಯಾಗಿರುವ ಮತ್ತೊಂದು ದೂರಿನ ಆಧಾರದಲ್ಲಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲರು ವಿವರ ಕೋರಿದ್ದಾರೆ. ಬೆಂಗಳೂರು, ಸೆಪ್ಟೆಂಬರ್ 19: ಮುಡಾ ಹಗರಣದಲ್ಲಿ ಈಗಾಗಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರು ಇದೀಗ ಅದೇ ಪ್ರಕರಣದಲ್ಲಿ ದಾಖಲಾಗಿರುವ ಮತ್ತೊಂದು ದೂರಿಗೆ ಸಂಬಂಧಿಸಿ...
ಉಡುಪಿಉತ್ತರಕನ್ನಡಕೃಷಿದಕ್ಷಿಣ ಕನ್ನಡದೆಹಲಿಬೆಂಗಳೂರುರಾಜ್ಯಸುದ್ದಿ

ಭೂತಾನ್ ನಿಂದ 17000 ಟನ್ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಅನುಮತಿ: ದರ ಕುಸಿತ ಆತಂಕದಲ್ಲಿ ರೈತರು – ಕಹಳೆ ನ್ಯೂಸ್

ನವದೆಹಲಿ: ಭೂತಾನ್ ನಿಂದ ಕನಿಷ್ಠ ಆಮದು ಬೆಲೆ(MIP) ಷರತ್ತು ಇಲ್ಲದೆ 17000 ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೇಂದ್ರ ವಾಣಿಜ್ಯ ಸಚಿವಾಲಯ ವ್ಯಾಪ್ತಿಯ ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಒಡಿಶಾದ ಹತಿಸರ್ ಮತ್ತು ಅಸ್ಸಾಂನ ದರ್ರಂಗಾದ ಕಸ್ಟಮ್ಸ್ ಕೇಂದ್ರದ ಮೂಲಕ ಈ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. 2022ರ ಸೆಪ್ಟೆಂಬರ್ ನಲ್ಲಿ ಪ್ರತಿ ವರ್ಷ ಭೂತಾನ್ ನಿಂದ...
ಕ್ರೈಮ್ಬೆಂಗಳೂರುಸಿನಿಮಾಸುದ್ದಿ

ನಿನ್ನ ಗರ್ಭಿಣಿ ಮಾಡ್ತೀನಿ, ಈಗಲೇ ನಾನು ಬರ್ತೀನಿ: ವರುಣ್ ಆರಾಧ್ಯ, ಮಾಜಿ ಪ್ರೇಯಸಿಯ ಚಾಟಿಂಗ್ ರಹಸ್ಯ ಬಯಲು – ಕಹಳೆ ನ್ಯೂಸ್

ಕಳೆದ ಕೆಲ ದಿನಗಳಿಂದ ನಟ ವರುಣ್ ಆರಾಧ್ಯ ಹಾಗೂ ಆತನ ಮಾಜಿ ಪ್ರೇಯಸಿ ಸಖತ್ ಸುದ್ದಿಯಾಗ್ತಿದ್ದಾರೆ. ವರುಣ್ ತನ್ನ ಖಾಸಗಿ ವಿಡಿಯೋಗಳನ್ನ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಪ್ರೇಯಸಿ ದೂರು ನೀಡಿದ್ದರು. ಬಳಿಕ ಇಬ್ಬರೂ ರಾಜಿ ಆಗಿ ಹೊರ ಬಂದ್ಮೇಲೆ, ಈಗ ಮತ್ತೆ ಆರೋಪಗಳ ವರಸೆ ಶುರು ಮಾಡಿದ್ದಾರೆ. ಮತ್ತೊಂದೆಡೆ ವರುಣ್ ಆರಾಧ್ಯನ ಚಾಟಿಂಗ್ ರಹಸ್ಯ ಲೀಕ್ ಆಗಿದೆ. ಸೆಪ್ಟೆಂಬರ್​​ 07.. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಯೂಟ್ಯುಬರ್...
ಬೆಂಗಳೂರುಸಂತಾಪಸುದ್ದಿ

ಬಿಜೆಪಿ ಸರ್ಕಾರದ ವಿರುದ್ಧ 40 % ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ‘ಕೆಂಪಣ್ಣ’ ಹೃದಯಾಘಾತದಿಂದ ನಿಧನ – ಕಹಳೆ ನ್ಯೂಸ್

ಬೆಂಗಳೂರು : ಹೃದಯಾಘಾತದಿಂದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ(84) ನಿಧನರಾಗಿದ್ದಾರೆ. ಬೆಂಗಳೂರಿನ ಜ್ಯೋತಿಪುರ ನಿವಾಸದಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಕೆಂಪಣ್ಣ ಅವರು ಬಿಜೆಪಿ ಸರ್ಕಾರದ ವಿರುದ್ಧ 40 % ಕಮಿಷನ್ ಆರೋಪ ಮಾಡಿ ಬಹಳ ಸುದ್ದಿಯಾಗಿದ್ದರು. ಕೆಂಪಣ್ಣ ಅವರು ಬೊಮ್ಮಾಯಿ ಸರ್ಕಾರದ ವಿರುದ್ಧ 40 % ಕಮಿಷನ್ ಆರೋಪ ಮಾಡಿದ ಬಳಿಕ 40 % ಕಮಿಷನ್ ಆರೋಪ ರಾಜ್ಯದಲ್ಲಿ...
ಬೆಂಗಳೂರುಸುದ್ದಿ

ಗುತ್ತಿಗೆದಾರ ಚಲುವರಾಜು ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ – ಕಹಳೆನ್ಯೂಸ್

ಬೆಂಗಳೂರು : ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಅವರಿಂದ ಜಾತಿ ನಿಂದನೆ, ಜೀವ ಬೆದರಿಕೆ ಹಾಗೂ ಕುಟುಂಬ ಸದಸ್ಯರ ಬಗ್ಗೆ ಹೀನ ಮಾತುಗಳಿಂದ ನೊಂದಿರುವ ಬಿಬಿಎಂಪಿ ಗುತ್ತಿಗೆದಾರರಾದ ಚಲುವರಾಜು ಅವರ ಮನೆಗೆ ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. * ಚಲುವರಾಜು ಕುಟುಂಬದೊಂದಿಗೆ ಸರ್ಕಾರವಿದೆ ಬಳಿಕ ಮಾತನಾಡಿದ ಸಚಿವರು, ಬಿಜೆಪಿ ಶಾಸಕರ ನಿಂದನೆ ಮಾತುಗಳಿಂದ ನೊಂದಿರುವ...
ಬೆಂಗಳೂರುರಾಜಕೀಯರಾಜ್ಯಸುದ್ದಿ

ಆರ್‌ಎಸ್‌ಎಸ್‌ ಕೆಂಗಣ್ಣಿಗೆ ಗುರಿಯಾದ ವಿಜಯೇಂದ್ರ..? ; ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು..? – ಕಹಳೆ ನ್ಯೂಸ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಸ್ಥಾನಕ್ಕೆ ಇದೀಗ ಕುತ್ತು ಎದುರಾಗಿದೆ. ವಿಜಯೇಂದ್ರ ಅವರ ಪದಚ್ಯುತಿ ಬಹುತೇಕ ಖಚಿತ ಎನ್ನಲಾಗುತ್ತಿದೆ. ಇತ್ತೀಚಿಗೆ ನಡೆದ ಆರ್‌ಎಸ್‌ಎಸ್‌ ಸಭೆಯಲ್ಲಿ ಬಿಜೆಪಿಯ ಭಿನ್ನಮತ ಸ್ಫೋಟಗೊಂಡಿತ್ತು. ಸಂಘದ ಹಿರಿಯರ ಮುಂದೆ ವಿಜಯೇಂದ್ರ ವಿರೋಧಿ ಬಣ ಹಲವು ದೂರನ್ನು ನೀಡಿತ್ತು. ವಿಜಯೇಂದ್ರ ಅವರ ವರ್ತನೆ ಆರ್‌ಎಸ್‌ಎಸ್‌ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ವಿಜಯೇಂದ್ರ ಪದಚ್ಯುತಿ ಆಗದಿದ್ದರೂ ಅಧಿಕಾರವನ್ನು ಮೊಟಕುಗೊಳಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಸಂಘಟನಾ ಕಾರ್ಯದರ್ಶಿ ನೇಮಕ...
1 5 6 7 8 9 113
Page 7 of 113