8 ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿರುವ ಮಂಗಳೂರಿನ ಐಎಸ್‌ಪಿಆರ್‌ಎಲ್ ಉದ್ಯೋಗಿಗಳ ‘ಹೆಚ್.ಆರ್ ಪಾಲಿಸಿ’ ಸಂಸದರ ಗಮನಕ್ಕೆ ಬಂದ ಕೂಡಲೇ ತುರ್ತು ಸ್ಪಂದನೆ; ಕ್ಯಾ. ಚೌಟ ಅವರಿಂದ ಪೆಟ್ರೋಲಿಯಂ ಸಚಿವಾಲಯ ಕಾರ್ಯದರ್ಶಿ ಭೇಟಿ-ಕಹಳೆ ನ್ಯೂಸ್
ದೆಹಲಿ: ಮಂಗಳೂರಿನಲ್ಲಿರುವ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ಐಎಸ್‌ಪಿಆರ್‌ಎಲ್)ನ ಕಚ್ಚಾ ತೈಲ ಸಂಗ್ರಹಾಗಾರ ಘಟಕದಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ವೇತನ ತಾರತಮ್ಯ, ಭತ್ಯೆ-ಭಡ್ತಿ ಸಮಸ್ಯೆಗೆ ವ್ಯವಸ್ಥಿತ ಎಚ್‌ಆರ್ ನೀತಿ ಅನುಷ್ಠಾನಗೊಳಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಅವರಲ್ಲಿ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಇಂದು ಪಂಕಜ್ ಅವರನ್ನು ಭೇಟಿ ಮಾಡಿದ ಸಂಸದರು, ಸುಮಾರು 8...