ಕೋವಿಡ್ 19 ಎಫೆಕ್ಟ್ : ಈ ವರ್ಷವೂ ಪ್ರಸಿದ್ಧ ಅಮರನಾಥ್ ಯಾತ್ರೆ ರದ್ದು – ಕಹಳೆ ನ್ಯೂಸ್
ನವದೆಹಲಿ:ದೇಶಾದ್ಯಂತ ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಯಾತ್ರಾರ್ಥಿಗಳ ಪವಿತ್ರ ವಾರ್ಷಿಕ ಅಮರನಾಥ್ ಯಾತ್ರೆಯನ್ನು ಈ ವರ್ಷ ರದ್ದುಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಕಳೆದ ವರ್ಷವೂ ಕೂಡಾ ಅಮರನಾಥ್ ಯಾತ್ರೆ ದಿಢೀರನೆ ರದ್ದುಗೊಂಡಿತ್ತು. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಘೋಷಿಸಿದ್ದ ಎರಡು ಮಹತ್ವದ ನಿರ್ಧಾರ. ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು ಮತ್ತು ಎರಡು ಕೇಂದ್ರಾಡಳಿತ ಪ್ರದೇಶದ ಘೋಷಣೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಅಮರನಾಥ್ ಯಾತ್ರೆಗೆ...