ಪ್ರಧಾನಿಗೆ ಕೊಲೆ ಬೆದರಿಕೆ : ಮೋದಿಯವರ ಭದ್ರತೆ ಹೆಚ್ಚಿಸಿದ ಎನ್ ಐಎ – ಕಹಳೆ ನ್ಯೂಸ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕೊಲೆ ಬೆದರಿಕೆ ಬಗ್ಗೆ ಇಮೇಲ್ ಬಂದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ)ಗೆ ಇಮೇಲ್ ಬಂದಿದ್ದು, ಇದಾದ ಬಳಿಕ ಕೇಂದ್ರ ಗುಪ್ತಚರ ಇಲಾಖೆ ಮತ್ತು ರಕ್ಷಣಾ ಗುಪ್ತಚರ ಇಲಾಖೆಗಳ ಹಿರಿಯ ಪ್ರತಿನಿಧಿಗಳನ್ನು ಹೊಂದಿರುವ ಬಹು ಸಂಸ್ಥೆ ಸಮನ್ವಯ ಕೇಂದ್ರ(ಎಂಎಸಿ)ವನ್ನು ಸಂಪರ್ಕಿಸಿ ಇಮೇಲ್ ಎಲ್ಲಿಂದ ಬಂದಿರುವುದು, ಕಳುಹಿಸಿದವರು ಯಾರು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದೆ. ಕಳೆದ ಆಗಸ್ಟ್...