Breaking News : ಮತ್ತೆ ಸಿಬಿಐ ಸಂಕಷ್ಟಕ್ಕೆ ಸಿಲುಕಿದ ಕೆಪಿಸಿಸಿ ಬಾಸ್ ಡಿಕೆಶಿ..! ; ಶಿವಕುಮಾರ್ ಮತ್ತೆ ಜೈಲುವಾಸ ಪಕ್ಕಾ..? – ಕಹಳೆ ನ್ಯೂಸ್
ಬೆಂಗಳೂರು,ಜು.22- ಹಣಕಾಸು ಅಕ್ರಮ ಪ್ರಕರಣದಲ್ಲಿ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ದಾಳಿಗೆ ಒಳಗಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಮತ್ತೆ ಸಿಬಿಐ ಸಂಕಷ್ಟ ಎದುರಾಗಿದೆ. ಏಕೆಂದರೆ ತಮ್ಮ ವಿರುದ್ಧ ರಾಜ್ಯಸರ್ಕಾರ ಸಿಬಿಐ ತನಿಖೆ ನಡೆಸಲು ಆದೇಶಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಹೈಕೋರ್ಟ್‍ನ ಏಕಸದಸ್ಯ ಪೀಠ ವಜಾಗೊಳಿಸಿದೆ. ಇದರಿಂದ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ಯಾವುದೇ ಸಂದರ್ಭದಲ್ಲಿ ಪುನಃ ದೂರು ದಾಖಲಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಡಿ.ಕೆ.ಶಿವಕುಮಾರ್ ಆಪ್ತ ಶಿವಣ್ಣ ಎಂಬುವರು ಸರ್ಕಾರ ಸಿಬಿಐ...