Sunday, April 20, 2025

ರಾಷ್ಟ್ರೀಯ

ಕ್ರೈಮ್ರಾಷ್ಟ್ರೀಯಸುದ್ದಿ

ರಾಜೀವ್ ಗಾಂಧಿ ಹಂತಕಿ ನಳಿನಿ ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನ – ಕಹಳೆ ನ್ಯೂಸ್

ಚೆನ್ನೈ, ಜು 21 : ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯಾಕಾಂಡದ ಪ್ರಮುಖ ಅಪರಾಧಿ ನಳಿನಿ ಶ್ರೀಹರನ್​ ವೆಲ್ಲೂರು ಸೋಮವಾರ ರಾತ್ರಿ ಕಾರಾಗೃಹದಲ್ಲಿಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿ ಶಿಕ್ಷೆ ಪಡೆದಿದ್ದ ನಳಿನಿ ಶ್ರೀಹರನ್​ ಕಳೆದ 29 ವರ್ಷಗಳಿಂದ ಇದೇ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ನಳಿನಿ ಪರ ವಕೀಲೆ ಪುಗಳೇಂದಿ ಅವರ ಪ್ರಕಾರ " ನಳಿನಿ ಮತ್ತು ಕಾರಾಗೃಹದಲ್ಲಿದ್ದ ಇನ್ನೊಬ್ಬ ಅಪರಾಧಿಯ ನಡುವೆ...
ಅಂತಾರಾಷ್ಟ್ರೀಯರಾಷ್ಟ್ರೀಯಸುದ್ದಿ

ಚೀನಾ ಮೇಲೆ ಕಣ್ಣು : ಬಂಗಾಳ ಕೊಲ್ಲಿಯಲ್ಲಿ ಭಾರತ, ಅಮೆರಿಕಾ ನೌಕಪಡೆ ಜಂಟಿ ಸಮರಾಭ್ಯಾಸ! – ಕಹಳೆ ನ್ಯೂಸ್

ನವದೆಹಲಿ: ಲಡಾಖ್ ಗಡಿ ಸಂಘರ್ಷ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವಣ ಭಿನ್ನಾಭಿಪ್ರಾಯ ಮುಂದುವರೆದಿರುವಂತೆಯೇ,  ಬಂಗಾಳ ಕೊಲ್ಲಿಯ  ಅಂಡಮಾನ್ ನಿಕೋಬರ್ ದ್ವೀಪದ ಬಳಿ ಭಾರತ ಮತ್ತು ಅಮೆರಿಕಾ ನೌಕಪಡೆಗಳು ಜಂಟಿ ಸಮರಾಭ್ಯಾಸದಲ್ಲಿ ನಿರತವಾಗಿವೆ. ಯುಎಸ್ಎಸ್ ನಿಮಿಟ್ಜ್ ನೇತೃತ್ವದ ಅಮೆರಿಕದ  ಫ್ಲೋಟಿಲ್ಲಾ ಪರಮಾಣು ಚಾಲಿತ ವಿಮಾನ ವಾಹಕ ನೌಕೆ ಹಾಗೂ ಭಾರತೀಯ ನೌಕಪಡೆಗಳು ಉಭಯ ಪಡೆಗಳ ನಡುವಣ ವಿಶ್ವಾಸ ಮೂಡಿಸಲು ಪಾಸೆಕ್ಸ್ (ನಿರ್ಗಮನ ವ್ಯಾಯಾಮದ )ಕುಶಲತೆಯ ಪ್ರದರ್ಶನ ನಡೆಸಿವೆ. ಚೀನಾದ ವಿಸ್ತರಣಾವಾದಿ ಯೋಜನೆಗಳಿಗೆ...
ರಾಷ್ಟ್ರೀಯಸುದ್ದಿ

ರಾಮ ಮಂದಿರ ಭೂಮಿ ಪೂಜೆಗೂ ಮುನ್ನ ಅಡ್ವಾಣಿ ವಿರುದ್ಧದ ಬಾಬ್ರಿ ಮಸೀದಿ ಪ್ರಕರಣ ಇತ್ಯರ್ಥಗೊಳಿಸಿ : ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಆಗ್ರಹ – ಕಹಳೆ ನ್ಯೂಸ್

ನವದೆಹಲಿ: ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮಕ್ಕೂ ಮುನ್ನ ಬಿಜೆಪಿ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ಅವರ ವಿರುದ್ಧ ಇರುವ ಬಾಬ್ರಿ ಮಸೀದಿ ಧ್ವಂಸ ಪ್ರಕರಣವನ್ನು ಕೈಬಿಡಬೇಕು ಎಂದು ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿರುವ ಸುಬ್ರಹ್ಮಣಿಯನ್ ಸ್ವಾಮಿ, ಒಂದು ವೇಳೆ ಅಡ್ವಾಣಿ, ಜೋಷಿ ಅವರು ಅಯೋಧ್ಯೆಯಲ್ಲಿನ ಕಟ್ಟಡವನ್ನು ಧ್ವಂಸಗೊಳಿಸಿದ್ದರೂ ಅವರು ಮಸೀದಿಯನ್ನು ಧ್ವಂಸಗೊಳಿಸಿಲ್ಲ, ಬದಲಾಗಿ ದೇವಾಲಯವನ್ನು ಪುನರ್...
ಉಡುಪಿರಾಷ್ಟ್ರೀಯಸುದ್ದಿ

ಭವ್ಯ ಶ್ರೀ ರಾಮಮಂದಿರ ಭೂಗರ್ಭಕ್ಕೆ ‘ಕೃಷ್ಣ ನಗರಿಯ ಮಣ್ಣು’ ; ಅಯೋಧ್ಯೆಯತ್ತ ಪವಿತ್ರ ಮೃತ್ತಿಕೆ – ಕಹಳೆ ನ್ಯೂಸ್

ಉಡುಪಿ, ಜು 21 : ಜಗತ್ತಿನ ಕೋಟ್ಯಂತರ ಹಿಂದುಗಳ ಶತಕಗಳ ಕನಸು ಸಾಕಾರಗೊಂಡು ಅಯೋಧ್ಯೆಯಲ್ಲಿ ಸದ್ಯದಲ್ಲೇ ನಿರ್ಮಾಣಗೊಳ್ಳಲಿರುವ ಭವ್ಯ ಶ್ರೀ ರಾಮ ಮಂದಿರದ ಭೂಗರ್ಭ ಸೇರಲು ಹೊರಟಿದೆ ಶ್ರೀಕೃಷ್ಣ ನಗರಿ ರಜತಪೀಠಪುರದ ಪವಿತ್ರ ಮೃತ್ತಿಕೆ!     ಅಯೋಧ್ಯೆಯ ಸಂಕಲ್ಪಿತ ಮಂದಿರದ ತಳಭಾಗಕ್ಕೆ ದೇಶದ ನೂರಾರು ನದಿಗಳು , ಅನೇಕ ಪುಣ್ಯ ಕ್ಷೇತ್ರಗಳ ಪವಿತ್ರ ಮೃತ್ತಿಕೆಯನ್ನು ಸೇರಿಸಲು ವಿಶ್ವಹಿಂದುಪರಿಷತ್ ನಿರ್ಧರಿಸಿದೆ . ಈ ಹಿನ್ನಲೆಯಲ್ಲಿ ಕೃಷ್ಣ ನಗರಿ ಉಡುಪಿಯ ಪವಿತ್ರ ಮಣ್ಣಿಗೆ...
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಕಾಗೆ ಹಾರಿಸಿ ತಲೆಮರೆಸಿಕೊಂಡಿದ್ದ, ಉತ್ತರಕುಮಾರ ಡ್ರೋಣ್ ಪ್ರತಾಪ್ ಅಂದರ್ ; ಪೋಲೀಸರ ಅತಿಥಿಯಾದ ಸಾವಿರ ಸುಳ್ಳಿನ ಸರದಾರ – ಕಹಳೆ ನ್ಯೂಸ್

ಬೆಂಗಳೂರು: ಎಫ್‍ಐಆರ್ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಡ್ರೋನ್ ಪ್ರತಾಪ್‍ನನ್ನು ಬಿಬಿಎಂಪಿ ಅಧಿಕಾರಿಗಳು ಮತ್ತು ತಲಘಟ್ಟಪುರ ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಹಿನ್ನೆಲೆ ಡ್ರೋನ್ ಪ್ರತಾಪ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಡ್ರೋನ್ ಪ್ರತಾಪ್ ತಲೆಮರೆಸಿಕೊಂಡಿದ್ದ. ಅಧಿಕಾರಿಗಳು ಅವನ ಹುಡುಕಾಟದಲ್ಲಿ ತೊಡಗಿದ್ದರು. ಇದೀಗ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.   ಪ್ರತಾಪ್‍ನನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಕೆಂಗೇರಿ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ....
ಬೆಂಗಳೂರುರಾಜಕೀಯರಾಜ್ಯಸುದ್ದಿ

ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅಕ್ರಮ ಸಾಬೀತಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಸವಾಲು – ಕಹಳೆ ನ್ಯೂಸ್

ಬೆಂಗಳೂರು: ಕೋವಿಡ್-19 ಉಪಕರಣ, ಸಾಮಗ್ರಿಗಳು, ವೆಂಟಿಲೇಟರ್​​ ಖರೀದಿಯಲ್ಲಿ ಅಕ್ರಮ, ಅವ್ಯವಹಾರಗಳು ನಡೆದಿದ್ದರೆ ಕೂಡಲೇ ರಾಜೀನಾಮೆ ನೀಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ. ವಿಕಾಸ ಸೌಧದಲ್ಲಿಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಜೊತೆ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕಾಶ ಭೂಮಿಗೆ ಎಷ್ಟು ದೂರ ಅಂತರ ಇದೆಯೋ ಅಷ್ಟೇ ಅಂತರದ ಸುಳ್ಳನ್ನು ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಒಂದು ವೇಳೆ...
ರಾಷ್ಟ್ರೀಯಸಂತಾಪಸುದ್ದಿ

ತಿರುಪತಿ ದೇವಸ್ಥಾನದ 73 ವರ್ಷದ ಮಾಜಿ ಪ್ರಧಾನ ಅರ್ಚಕ ಶ್ರೀನಿವಾಸಮೂರ್ತಿ ದೀಕ್ಷಿತಲು ಕೊರೋನಾಗೆ ಬಲಿ – ಕಹಳೆ ನ್ಯೂಸ್

ತಿರುಪತಿ: ತಿರುಪತಿ, ತಿರುಮಲದ ಪ್ರಸಿದ್ದ  ವೆಂಕಟೇಶ್ವರ ದೇವಾಲಯದ  ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಯ ಮಾಜಿ ಪ್ರಧಾನ ಅರ್ಚಕರೊಬ್ಬರು ಸೋಮವಾರ ಕೊರೋನಾವೈರಸ್‌ನಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಿರುಪತಿಯಲ್ಲಿನ ಕೋವಿಡ್ ಕೇಂದ್ರವೊಂದರಲ್ಲಿ ಟಿಟಿಡಿಯ ಮಾಜಿ ಪ್ರಧಾನ ಅರ್ಚಕ ಶ್ರೀನಿವಾಸಮೂರ್ತಿ ದೀಕ್ಷಿತಲು ಇಂದು ಮುಂಜಾನೆ ವೈರಸ್‌ಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಮೃತ ದೀಕ್ಷಿತಲು ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರು ಮೂರು ದಶಕಗಳಿಗಿಂತ ಹೆಚ್ಚು ಕಾಲ ಟಿಟಿಡಿಯಲ್ಲಿ ಸೇವೆ...
ಬೆಂಗಳೂರುಸಿನಿಮಾಸುದ್ದಿ

ಸರ್ಜಾ ಕುಟುಂಬದ ಮತ್ತೋರ್ವ ಸದಸ್ಯೆ‌ಗೂ ಕೊರೊನಾ ಸೋಂಕು ದೃಢ ; ಅರ್ಜುನ್‌ ಸರ್ಜಾ ಮಗಳು ನಟಿ ಐಶ್ವರ್ಯಾಗೆ ಕೊರೊನಾ ಪಾಸಿಟಿವ್‌ – ಕಹಳೆ ನ್ಯೂಸ್

ಬೆಂಗಳೂರು, ಜು. 20 : ಇತ್ತೀಚೆಗಷ್ಟೇ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಈಗ ಸರ್ಜಾ ಕುಟುಂಬದ ಮತ್ತೋರ್ವ ಸದಸ್ಯೆ ಅರ್ಜುನ್‌ ಸರ್ಜಾ ಮಗಳು ನಟಿ ಐಶ್ವರ್ಯಾ ಅರ್ಜುನ್‌ಗೂ ಕೂಡಾ ಕೊರೊನಾ ಸೋಂಕು ದೃಢಪಟ್ಟಿದೆ.   ಈ ಬಗ್ಗೆ ಸ್ವತಃ ಅವರೇ ತಿಳಿಸಿದ್ದು, ನನಗೆ ಕೊರೊನಾ ಪಾಸಿಟಿವ್‌ ಇರುವುದು ತಿಳಿದು ಬಂದಿದೆ. ನಾನು ಹೋಂ ಕ್ವಾರಂಟೈನ್‌ನಲ್ಲಿದ್ದು ಮನೆಯಲ್ಲೇ ವೈದ್ಯರು ತಿಳಿಸಿರುವ ಅಗತ್ತ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ. ಇತ್ತೀಚೆಗೆ ನನ್ನ...
1 194 195 196
Page 196 of 196
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ