ಜ.4 ಮತ್ತು 5ರಂದು ದೇವಸ್ಥಾನ ಸಂಸ್ಕೃತಿ ರಕ್ಷಣೆಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ ಕಾರ್ಯಕ್ರಮ-ಕಹಳೆ ನ್ಯೂಸ್
ಬೆಂಗಳೂರು : ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ' ವು ಜ.4 ಮತ್ತು 5ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಅಧಿವೇಶನದಲ್ಲಿ ರಾಜ್ಯದಾದ್ಯಂತದ 1000 ಕ್ಕೂ ಅಧಿಕ ದೇವಸ್ಥಾನ ವಿಶ್ವಸ್ಥರು, ಪ್ರತಿನಿಧಿಗಳು, ಪುರೋಹಿತರು, ದೇವಸ್ಥಾನದ ರಕ್ಷಣೆಗಾಗಿ ಹೋರಾಡುವ ನ್ಯಾಯವಾದಿಗಳು ಮುಂತಾದವರು ಸಹಭಾಗಿಯಾಗುವರು. ಉತ್ತರ ಪ್ರದೇಶದ ಪ್ರಸಿದ್ಧ ಕಥಾವಾಚಕರು ಮತ್ತು ಸಂಸ್ಥಾಪಕರು ವಿಶ್ವ ಶಾಂತಿ ಸೇವಾ ಟ್ರಸ್ಟ್...