ಪೊಲೀಸ್ ಆಗಬೇಕೆಂಬ ಕನಸು ಹೊತ್ತಿದ್ದ ಭವ್ಯಾ ಪೂಜಾರಿ ಆಗಿದ್ದು ನಟಿ..! – ಕಹಳೆ ನ್ಯೂಸ್
ಬಣ್ಣದ ಲೋಕವೇ ಹಾಗೆ. ಇದಕ್ಕೆ ಆಕರ್ಷಿತರಾಗವರಿಲ್ಲ. ಈ ಬಣ್ಣದ ಲೋಕದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಮುಖಗಳನ್ನ ಕಾಣುತ್ತೇವೆ. ಆದರೆ ನಟನೆ ಮೂಲಕ ಪ್ರೇಕ್ಷಕನ ಮನದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಆದ್ರೆ ಇಲ್ಲೊಬ್ಬರು ಪಟ ಪಟ ಅಂತಾನೇ ಮಾತಾಡ್ತಾ ತನ್ನ ವಿಭಿನ್ನ ನಟನೆಯ ಮೂಲಕವೇ ಪ್ರೇಕ್ಷಕರ ಮನಸ್ಸಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರೇ ಬೆಳ್ಳಾರೆಯ ಬೆಡಗಿ ಭವ್ಯಾ ಪೂಜಾರಿ. ಮೂಲತಃ ಸುಳ್ಯ ತಾಲೂಕಿನ ಬೆಳ್ಳಾರೆಯವರಾದ ಭವ್ಯಾ ರಂಗಭೂಮಿ ಕಲಾವಿದೆ ಹಾಗೂ...