ಖ್ಯಾತ ನಿರ್ದೇಶಕ ‘ಶ್ಯಾಮ್ ಬೆನಗಲ್’ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ – ಕಹಳೆ ನ್ಯೂಸ್
ನವದೆಹಲಿ : ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ 'ಭಾರತೀಯ ಚಿತ್ರರಂಗದ ಮೇಲೆ ಆಳವಾದ ಪ್ರಭಾವ ಬೀರಿದ ಕಥೆ ಹೇಳುವ ಶ್ಯಾಮ್ ಬೆನಗಲ್ ಜಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ಕೃತಿಗಳನ್ನು, ಸಿನಿಮಾಗಳನ್ನು ಜನರು ಮೆಚ್ಚುತ್ತಲೇ ಇರುತ್ತಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ....