ತುಳು ಚಲನಚಿತ್ರ ಲೋಕದಲ್ಲೊಂದು ವಿಭಿನ್ನ ಪ್ರಯತ್ನದ, ಅಪೂರ್ವ ಅಭಿನಯದ ಹಳ್ಳಿ ಹುಡುಗಿ ಪಾತ್ರದಲ್ಲಿ ಸೈ ಎನಿಸಿಕೊಂಡ ನ್ಯಾಚುರಲ್ ಬ್ಯೂಟಿ ಅನ್ವಿತಾ ಸಾಗರ್..!! – ಕಹಳೆ ನ್ಯೂಸ್
ಅನ್ವಿತಾ ಸಾಗರ್ ನಮ್ಮ ಕುಡ್ಲದ ಬೆಡಗಿ. ಈಕೆಯ ಮೂಲ ಹೆಸರು ಪಾರ್ವತಿ. 1992 ರ ಫೆಬ್ರವರಿ 20 ರಂದು ಜನಿಸಿದ ಈ ನ್ಯಾಚುರಲ್ ಬ್ಯೂಟಿ ಈಗ ಕನ್ನಡ ಸೀರಿಯಲ್ ನಟಿ ಅನ್ನೋದು ನಿಮಗೆ ಗೊತ್ತೇ ಇದೆ. ಆದ್ರೆ ಅದಕ್ಕೂ ಮುನ್ನ ಇವರು ಮಾಡೆಲ್ ಆಗಿದ್ದರು, ಟಿವಿ ಚಾನೆಲ್ ಗಳಲ್ಲಿ ನಿರೂಪಣೆ ಮಾಡ್ತಿದ್ರು, ಇನ್ನೂ ಹೇಳ್ಬೇಕಾದ್ರೆ ಇವರು ಕನ್ನಡ ಮತ್ತು ತುಳು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ ಅನ್ನೋದು ಗಮನಾರ್ಹ ಸಂಗತಿ. ...