ತಮಿಳು ಸಿನಿ ಕ್ಷೇತ್ರದಲ್ಲಿ ಕಮಾಲ್ ಮಾಡ್ತಿದ್ದಾರೆ ಮಂಗಳೂರಿನ ಸುಂದರಿ ಬಹುಭಾಷಾ ನಟಿ ಆದ್ಯಾ ನಾಯಕ್ –ಕಹಳೆ ನ್ಯೂಸ್
ಮಂಗಳೂರು : ನಗುಮೊಗದ ಚೆಂದುಳ್ಳಿ ಚೆಲುವೆ..ತನ್ನ ನೋಟದಲ್ಲೆ ಎಲ್ಲರನ್ನ ಮೋಡಿ ಮಾಡೋ ಸುಂದರಿ ಆದ್ಯಾ ನಾಯಕ್. ಇದೀಗ ಆದ್ಯಾ ಸಿನಿ ಲೋಕದಲ್ಲಿ ಮಿಂಚುತ್ತಿದ್ದು ಅಪ್ಪಟ ಪ್ರತಿಭಾನ್ವಿತ ಬಹುಭಾಷಾ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿ ಲೋಕ ಅಂದ್ರೆನೇ ಹಾಗೇ ಒಂದು ಬಾರಿ ಎಲ್ಲರನ್ನ ಸೆಳೆದು ಬಿಡುತ್ತೆ. ಆದ್ರೆ ಈ ಕ್ಷೇತ್ರ ಕಲೆಯನ್ನ ಉಳಿಸಿ ಬೆಳೆಸುವ ಕಲಾವಿದರ ಕೈ ಹಿಡಿದು ಮುನ್ನಡೆಸುತ್ತಿದ್ದು, ಈ ಸಿನಿಜಗತ್ತಿನಲ್ಲಿ ನಮ್ಮ ಕರಾವಳಿಯ ಅನೇಕ ಪ್ರತಿಭೆಗಳಿದ್ದಾರೆ. ಈ ಸಾಲಿನಲ್ಲಿ ಆದ್ಯ...