ಸಿನಿ ಪ್ರೀಯರ ಮುಂದೆ ಬರಲು ಸಜ್ಜಾಗಿದೆ ವಿಜೆ ವಿನೀತ್, ಕರಿಷ್ಮಾ ಅಮೀನ್ ಮತ್ತು ಯಶಾ ರವಿಶಂಕರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ, ರಾಹುಲ್ ಅಮೀನ್ ನಿರ್ದೇಶನದ ತುಳು ಸಿನಿಮಾ ” ರಾಜ್ ಸೌಂಡ್ಸ್ & ಲೈಟ್ಸ್ ” – ಕಹಳೆ ನ್ಯೂಸ್
ಮಂಗಳೂರು, ಫೆ 09 : ರಾಹುಲ್ ಅಮೀನ್ ನಿರ್ದೇಶನದ ತುಳು ಸಿನಿಮಾ 'ರಾಜ್ ಸೌಂಡ್ಸ್ & ಲೈಟ್ಸ್' ಮೇ 20, 2022 ರಂದು ಸಿನಿ ಪ್ರೀಯರ ಮುಂದೆ ಬರಲು ಸಜ್ಜಾಗಿದೆ. ಚಲನಚಿತ್ರವು ಈ ಹಿಂದೆ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು, ಆದರೆ ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಸದ್ಯ ಚಿತ್ರ ತಂಡವು ಸಿನಿ ಪ್ರೇಕ್ಷಕರಿಗೆ ಸಿಹಿ ಸುದ್ದಿ ತಿಳಿಸಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಈಗಾಗಲೆ ಎಲ್ಲಾ ನಟರ...