ತುಳು ಚಿತ್ರರಂಗದ ಬಹುನಿರೀಕ್ಷೆಯ ಅನಂತ್ ನಾಗ್ ಅಭಿನಯದ ಚಿತ್ರ “ ಇಂಗ್ಲಿಷ್ ” ಮಾರ್ಚ್ 26ರಂದು ವಿಶ್ವದಾದ್ಯಂತ ಬಿಡುಗಡೆ ; ಕರ್ನಾಟಕದ ಮೂಲೆ ಮೂಲೆಗಳಿಗೂ ತುಳು ಚಿತ್ರ ಸುದ್ದಿಗೋಷ್ಠಿಯಲ್ಲಿ ಖ್ಯಾತ ನಿರ್ಮಾಪಕ ಹರೀಶ್ ಶೇರಿಗಾರ್ – ಕಹಳೆ ನ್ಯೂಸ್
ಮಂಗಳೂರು / ಬೆಂಗಳೂರು : ತುಳು ಭಾಷೆಯ ಚಿತ್ರಗಳು ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗದೇ ಕರ್ನಾಟಕದ ಮೂಲೆ ಮೂಲೆಗಳಿಗೂ ತಲುಪಬೇಕು ಹಾಗು ಕನ್ನಡ ಭಾಷೆಯ ಚಿತ್ರಕ್ಕೆ ಎಷ್ಟು ಪ್ರಾಧಾನ್ಯ ನೀಡುತ್ತೇವೆಯೋ ಅಷ್ಟೇ ಪ್ರಾಧಾನ್ಯತೆ ತುಳು ಭಾಷೆಯ ಚಿತ್ರಕ್ಕೂ ನೀಡುವ ಮೂಲಕ ಕರುನಾಡಿನ ಸಮಸ್ತ ಜನತೆಯು ತುಳು ಭಾಷೆಯ ಚಿತ್ರಗಳನ್ನು ಪ್ರೋತ್ಸಾಹಿಸಬೇಕು ಎಂದು ಕನ್ನಡ-ತುಳು ಸಿನಿಮಾ ನಿರ್ಮಾಪಕ, ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹೇಳಿದರು. ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್...