ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡಕ್ಕೆ 12 ರಾಷ್ಟ್ರ ಪ್ರಶಸ್ತಿ: ನಾತಿಚರಾಮಿಗೆ 5, ಕೆಜಿಎಫ್ ಗೆ 2 – ಕಹಳೆ ನ್ಯೂಸ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ಹಾಗೂ ಶೃತಿ ಹರಿಹರನ್ ಅಭಿನಯದ ನಾತಿಚರಾಮಿ ಚಿತ್ರ, ರಿಷಭ್‍ಶೆಟ್ಟಿ, ನಿರ್ದೇಶಕ, ಸ.ಹಿ.ಪ್ರಾ.ಶಾಲೆ ಕಾಸರಗೋಡು ಸೇರಿದಂತೆ ಕನ್ನಡಕ್ಕೆ ಒಟ್ಟು 12 ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದೇ ವರ್ಷದಲ್ಲಿ ಇಷ್ಟು ಪ್ರಶಸ್ತಿಗಳು ಬಂದಿರುವುದು ಇದೇ ಮೊದಲು ಪ್ರಶಸ್ತಿಗಳು ಅತ್ಯುತ್ತಮ ಸಾಹಸ ಸಿನಿಮಾ- ಕೆಜಿಎಫ್, ರಾಷ್ಟ್ರೀಯ ಏಕತೆ ವಿಭಾಗ - ಒಂದಲ್ಲಾ ಎರಡಲ್ಲಾ, ಅತ್ಯುತ್ತಮ ಬಾಲ ಕಲಾವಿದ ಮಾಸ್ಟರ್ ರೋಹಿತ್(ಒಂದಲ್ಲಾ ಎರಡಲ್ಲಾ),...