ಕನ್ನಡ ಬರೋದಿಲ್ಲ ಅಂದ ರಶ್ಮಿಕಾಗೆ ಅಭಿಮಾನಿಗಳು ಮಾಡಿದ್ದೇನು..? – ಕಹಳೆ ನ್ಯೂಸ್
ರಶ್ಮಿಕಾ ಮಂದಣ್ಣ ಹುಟ್ಟಿದು ಕರುನಾಡಿನಲ್ಲಿ. ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಮೂಲಕ ಪದಾರ್ಪಣೆ ಮಾಡಿದ ಈ ಚೆಲುವೆಗೆ ಒಂದೇ ಒಂದು ಚಿತ್ರ ಸಖತ್ ಫೇಮ್-ನೇಮ್ ತಂದುಕೊಟ್ಟಿತು. ತದನಂತರ ಈಕೆ ಕನ್ನಡದ ನಟದಿಗ್ಗಜರೊಂದಿಗೆ ನಟಿಸಿ ಟಾಪ್ ನಟಿಗಳ ಪಟ್ಟಿಗೆ ಸೇರಿಕೊಂಡರು. ಹೀಗೆ ಇರುವಾಗಲೇ ಬೇರೆ ಭಾಷೆಗಳಿಂದ ಈಕೆಗೆ ಅವಕಾಶಗಳು ಕೂಡಿಬಂದವು. ತಮಿಳು, ತೆಲುಗಿನಲ್ಲಿ ಈಗಾಗಲೇ ಅನೇಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಬಹುಭಾಷಾ ನಟಿಯಾಗಿ ಮಿಂಚಿದವರು ರಶ್ಮಿಕಾ ಮಂದಣ್ಣ. ಸದಾ ಸುದ್ದಿಯಲ್ಲೇ ಇರುವ...