ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ; ಅರೆಬೆತ್ತಲೆ ಪ್ರತಿಭಟನೆ ಮೂಲಕ ಸದ್ದು ಮಾಡಿದ ನಟಿ ಶ್ರೀರೆಡ್ಡಿ ಪೋಸ್ಟ್ ವೈರಲ್! – ಕಹಳೆ ನ್ಯೂಸ್
ಬೆಂಗಳೂರು: ಕೆಲವು ವರ್ಷಗಳ ಹಿಂದೆ ಟಾಲಿವುಡ್‌ನಲ್ಲಿ ʻಮಿಟೂʼ ಹಾಗೂ ಕ್ಯಾಸ್ಟಿಂಗ್ ಕೌಚ್ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಿದ ನಟಿಯರಲ್ಲಿ ಶ್ರೀ ರೆಡ್ಡಿ (Sri Reddy) ಕೂಡ ಒಬ್ಬರು. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯ ಮುಂದೆ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದರು. ತೆಲುಗು ಫಿಲಂ ಚೇಂಬರ್ ಮುಂದೆ ನಟಿ ಶ್ರೀರೆಡ್ಡಿ ಟಾಪ್ ಲೆಸ್ ಪ್ರತಿಭಟನೆ ನಡೆಸಿ ದೇಶಾದ್ಯಂತ ಸಂಚಲನ ಮೂಡಿಸಿತ್ತು. ನಟಿ ಶ್ರೀರೆಡ್ಡಿ ತೆಲುಗು ಸಿನಿರಂಗದ ಮೇಲೆ ಲೈಂಗಿಕ...