Sunday, January 19, 2025

ಸಿನಿಮಾ

Jnana Aithal Did
ಸಿನಿಮಾಸುದ್ದಿ

ಖಾಸಗಿ ವಾಹಿನಿಯ ರಿಯಾಲಿಟೀ ಶೋನಲ್ಲಿ ಫೈನಲ್ಸ್ ಪ್ರವೇಶಿಸಿದ ಕರಾವಳಿ ಬೆಡಗಿ ; ಕನ್ನಡಿಗರ ಮನಸೂರೆಗೊಳಿಸಿದ ಬಾಲೆ ಜ್ಞಾನಾ ಐತಾಳ್ – ಕಹಳೆ ನ್ಯೂಸ್

ಕರಾವಳಿ : ನೃತ್ಯ ಕ್ಷೇತ್ರದಲ್ಲಿ ಆಕೆಯದ್ದು ಅಮೋಘ ಸಾಧನೆ, ಭರತನಾಟ್ಯದಲ್ಲಿ ರ್‍ಯಾಂಕ್‌, ಹಲವಾರು ರಿಯಾಲಿಟಿ ಶೋಗಳಲ್ಲಿ ಬಹುಮಾನಗಳು, ರಾಜ್ಯ-ರಾಷ್ಟ್ರ ಮಟ್ಟದಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದ ಪ್ರತಿಭೆ, ಕಲಿಕೆಯಲ್ಲೂ ಅತ್ಯುತ್ತಮ ಸಾಧನೆ, ಸಿನಿಮಾ ಕ್ಷೇತ್ರದಿಂದಲೂ ಹತ್ತಾರು ಆಫರ್‌ ಗಳು ! ಇದು ಮಂಗಳೂರಿನ ನೃತ್ಯಪಟು, ನಗರದ ಕೆನರಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಜ್ಞಾನಾ ಐತಾಳ್‌ ಅವರ ಸಾಧನೆಯ ನೋಟಗಳು. ಬಾಲ್ಯದಿಂದಲೇ ನೃತ್ಯ ಕ್ಷೇತ್ರದ ಕುರಿತು ವಿಶೇಷ ಆಸಕ್ತಿ ಹೊಂದಿದ್ದ ಜ್ಞಾನ ಐತಾಳ್‌...
ಸಿನಿಮಾ

ಗಾರ್ಡನ್ ಸಿಟಿಯಲ್ಲಿ ಅದ್ದೂರಿಯಾಗಿ ಸಮಾಪ್ತಿಯಾದ ಫ್ಯಾಶನ್ ವೈಭವ ; ಬೆಂಗಳೂರು ಟೈಮ್ಸ್ ಫ್ಯಾಶನ್ ವೀಕ್ ರ್ಯಾಂಪ್ ಶೋಗೆ ತಾರಾ ತಂಡದ ಮೆರುಗು – ಕಹಳೆ ನ್ಯೂಸ್

ಬೆಂಗಳೂರು : ಭಾರತದ ಉದ್ಯಾನ ನಗರ ಎಂದೇ ಕರೆಯಲ್ಪಡುವ ಬೆಂಗಳೂರು ನಗರದಲ್ಲಿ ಬೆಂಗಳೂರು ಟೈಮ್ಸ್ ಫ್ಯಾಶನ್ ವೀಕ್ 2018 ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಫ್ಯಾಶನ್ ಅಭಿರುಚಿಯ ಯುವ ಸಮೂಹ ಹಾಗೂ ಹಲವು ಅತ್ಯುತ್ತಮ ಡಿಸೈನರ್ ಗಳ ಪ್ರತಿಭಾ ಪ್ರದರ್ಶನವನ್ನು ಅನಾವರಣ ಮಾಡಲಾಯಿತು. ಬೆಂಗಳೂರಿನಲ್ಲಿ ನಡೆದ ಈ ಫ್ಯಾಶನ್ ಹಬ್ಬದಲ್ಲಿ ಫ್ಯಾಶನ್ ಲೋಕದ ದಿಗ್ಗಜರೆಲ್ಲಾ ಒಟ್ಟು ಸೇರಿದ್ದರು. ಹಲವು ಖ್ಯಾತನಾಮರು ಸೇರಿದಂತೆ ಫ್ಯಾಶನ್ ಲೋಕದಲ್ಲಿ ಮಿಂಚಲು ತಯಾರಾದ ಯುವ ಸಮೂಹವೇ...
ಸಿನಿಮಾ

6 ದಿನ, 6 ಜಾಗಗಳಲ್ಲಿ ನಡೆಯಲಿದೆ ರಮಣನ ಮದುವೆ! – ಕಹಳೆ ನ್ಯೂಸ್

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಾಧಾ ರಮಣ ಧಾರಾವಾಹಿಯ ನಟ ಸ್ಕಂದ ಆಶೋಕ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟ ಸ್ಕಂದ ಆಶೋಕ್ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ತನ್ನ ಪ್ರೇಯಸಿ ಶಿಖಾ ಪ್ರಸಾದ್ ಜೊತೆ ತಮ್ಮ ಪೂರ್ತಿ ಜೀವನವನ್ನು ಕಳೆಯಲು ಸಿದ್ಧರಾಗಿದ್ದಾರೆ. ಇನ್ನೂ ಇವರ ಮದುವೆ ಆರು ದಿನಗಳ ಕಾಲ ನಡಯಲಿದೆ. ಒಂದೊಂದು ಶಾಸ್ತ್ರದ ಕಾರ್ಯಕ್ರಮಗಳನ್ನು ಒಂದೊಂದು ಸ್ಥಳದಲ್ಲಿ ನಡೆಯಲು ಸಿದ್ಧತೆ ನಡೆದಿದೆ. ಮೇ 25ರಿಂದ ಮದುವೆ ಕಾರ್ಯಕ್ರಮಗಳು ನಡೆಯಲಿದ್ದು, ಮೇ...
ಸಿನಿಮಾ

ಕಟಪಾಡಿ ಕಟ್ಟಪ್ಪೆ ತುಳು ಚಿತ್ರದ ಆಡಿಯೋ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಮಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಸ್ಯಾಂಡಲ್‍ವುಡ್‍ನಿಂದ ಕೋಸ್ಟಲ್‍ವುಡ್ ಕಡೆಗೆ ಬಂದಿದ್ದು ಮಂಗಳೂರಿನಲ್ಲಿ ತುಳು ಚಿತ್ರವೊಂದರ ಆಡಿಯೋ ರಿಲೀಸ್ ಮಾಡಿದರು. ತುಳು ಚಿತ್ರ ‘ಕಟಪಾಡಿ ಕಟ್ಟಪ್ಪೆ’ ಅನ್ನುವ ತುಳು ಚಿತ್ರದ ಆಡಿಯೋ ರಿಲೀಸ್‍ನ್ನು ಮಂಗಳೂರಿನ ಪುರಭವನದಲ್ಲಿ ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್ ತುಳು ಭಾಷೆಯನ್ನು ಮುಂದಿನ ದಿನಗಳಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ ಅಂತಾ ಹೇಳಿದ್ರು. ಅದ್ಧೂರಿ ಆಡಿಯೋ ರಿಲೀಸ್ ಬಳಿಕ ಮಾತನಾಡಿದ ಕಿಚ್ಚ ಸುದೀಪ್, ತುಳು ಚಿತ್ರರಂಗ ಹಾಗೂ ತುಳು ಭಾಷೆಯನ್ನು...
ಸಿನಿಮಾ

ಸ್ಕರ್ಟ್ ಎಳೆದು, ಇದರ ಕೆಳಗೆ ಏನಿದೆ ತೋರಿಸು: ಮಾಡೆಲ್‍ಗೆ ಕಾಮುಕರ ಕಿರುಕುಳ – ಕಹಳೆ ನ್ಯೂಸ್

ಇಂದೋರ್: ಯುವಕರಿಬ್ಬರು ಬೈಕಿನಲ್ಲಿ ಬಂದು ಮಾಡೆಲ್‍ನ ಸ್ಕರ್ಟ್ ಎಳೆದು ಇದರ ಕೆಳಗೆ ಏನಿದೆ ತೋರಿಸು ಎಂದು ಅಸಭ್ಯವಾಗಿ ವರ್ತಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ತನ್ನ ಜೊತೆ ಆದ ಈ ಘಟನೆ ಬಗ್ಗೆ ರೂಪದರ್ಶಿ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಯುವಕರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ನಂತರ ಒಬ್ಬರು ಹಿರಿಯ ವ್ಯಕ್ತಿ ನನ್ನ ಹತ್ತಿರ ಬಂದು ನೀನು ಸ್ಕರ್ಟ್ ಹಾಕಿದೀಯಾ. ಹಾಗಾಗಿ ಅವರು ನಿನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು...
ಸಿನಿಮಾ

ಶಾರೂಕ್ ಖಾನ್ ನನ್ನ ಜೀವನ ಹಾಳು ಮಾಡಿದ್ದಾರೆ ; ಮುಂಬೈ ಯುವತಿ – ಕಹಳೆ ನ್ಯೂಸ್

ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ನನ್ನ ಜೀವನ ಹಾಳು ಮಾಡಿದ್ದಾರೆ ಎಂದು ಮುಂಬೈನ ಯುವತಿಯೊಬ್ಬಳು ತನ್ನ ಇನ್‍ಸ್ಟಾಗ್ರಾಂನಲ್ಲಿ ಬರೆದು ಪೋಸ್ಟ್ ಮಾಡಿದ್ದು, ಈಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆಯಾಗುತ್ತಿದೆ. ಮುಂಬೈ ಮೂಲದ ಯುವತಿಯೊಬ್ಬಳ ‘ಹ್ಯುಮನ್ಸ್ ಆಫ್ ಬಾಂಬೆ’ ಎಂಬ ಪೇಜ್‍ನಲ್ಲಿ ಆಕೆಯ ಪ್ರೇಮಕಥೆಯನ್ನು ಪೋಸ್ಟ್ ಮಾಡಲಾಗಿತ್ತು. ಅದರಲ್ಲಿ ಶಾರೂಕ್ ಖಾನ್ ನನ್ನ ಜೀವನವನ್ನು ಹಾಳು ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾಳೆ. ಶಾರೂಕ್ ಖಾನ್ ನನ್ನ ಜೀವನವನ್ನು ಹಾಳು...
ಸಿನಿಮಾ

ಅಶ್ವಿನಿ ನಕ್ಷತ್ರ ಚೆಲುವೆ ಮಯೂರಿ ಮಾಜಿ ಸಿಎಂ ಒಬ್ಬರ ಪುತ್ರಿ – Kahale News

ಬೆಂಗಳೂರು: ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಖ್ಯಾತಿಯ ನಟಿ ಮಯೂರಿ ಮಾಜಿ  ಮುಖ್ಯಮಂತ್ರಿಯೊಬ್ಬರ ಪುತ್ರಿಯಂತೆ. ಇಂಥದೊಂದು ಇಂಟರೆಸ್ಟಿಂಗ್  ಸಂಗತಿ ಈಗ ಅವರಿಂದಲೇ ಬಹಿರಂಗಗೊಂಡಿದೆ. ‘ನಾನು ಮಾಜಿ ಸಿಎಂ ಪುತ್ರಿ. ನನಗೆ ಸಿಕ್ಕಾಪಟ್ಟೆ ಷೋಕಿ. ಸದಾ ವೆಸ್ಟರ್ನ್  ಲುಕ್‌ನಲ್ಲಿ ಇರಬೇಕೆನ್ನುವ ಕ್ರೇಜ್’ ಅಂತಲೂ ಹೇಳಿಕೊಂಡಿರುವ  ಅವರು, ತಮಗೆ ತಂದೆಯಾಗಿರುವ ಆ ಮಾಜಿ ಸಿಎಂ ಯಾರು? ಅವರು ಯಾವಾಗ ಮುಖ್ಯಮಂತ್ರಿ ಆಗಿದ್ದರು? ಈ ಪ್ರಶ್ನೆಗಳಿಗೆ ಮಾತ್ರ ಸದ್ಯಕ್ಕೆ ಅವರಿಂದ ಉತ್ತರ ಇಲ್ಲ!!    ...
ಸಿನಿಮಾ

ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನದ ಹಾಗೂ ನಿರ್ಮಾಣದ  “ಜೆವಣ್” ಜಿ.ಯಸ್. ಬಿ ಕೊಂಕಣಿ ಭಾಷೆಯ ಕಾಮಿಡಿ ಚಲನಚಿತ್ರ ಮುಹೂರ್ತ

ಶ್ರೀ ಮಹಾಮಾಯಿ ಸಿನಿ ಕ್ರಿಯೇಶನ್ಸ ರವರ ಎರಡನೇ ಕಲಾಕಾಣಿಕೆ,  ಜಿ.ಎಸ್.ಬಿ.ಕೊಂಕಣಿ ಯಲ್ಲಿ ನಿರರ್ಗಳ ಹಾಸ್ಯ ಚಿತ್ರ   "ಜೆವಣ್" .   ಕರೋಪಾಡಿ ಅಕ್ಷಯ್ ನಾಯಕ್ ನಿರ್ದೇಶನದ ಹಾಗೂ ನಿರ್ಮಾಣದ  "ಜೆವಣ್" ಜಿ.ಯಸ್. ಬಿ ಕೊಂಕಣಿ ಭಾಷೆಯ ಕಾಮಿಡಿ ಚಲನಚಿತ್ರ. ಈ ಸಿನೆಮಾದ ಮುಹೂರ್ತ ಅಕ್ಷಯ ತೃತೀಯ ದಿನದಂದು ಬಂಟ್ವಾಳ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಜರುಗಿತು.  ವಿಟ್ಲ ಮಂಗೇಶ್ ಭಟ್ ಹಾಗೂ ಪ್ರಮೋದ್ ಭಟ್ ಅಭಿನಯಿಸಿದ ಹಾಸ್ಯಮಯ ಸನ್ನಿವೇಶವನ್ನು ಮುಹೂರ್ತಕ್ಕಾಗಿ ಚಿತ್ರೀಕರಿಸಲಾಯಿತು.ವೇ.ಮೂ.ಬಿ.ವಸಂತ...
1 72 73 74 75 76 81
Page 74 of 81