ಗಾರ್ಡನ್ ಸಿಟಿಯಲ್ಲಿ ಅದ್ದೂರಿಯಾಗಿ ಸಮಾಪ್ತಿಯಾದ ಫ್ಯಾಶನ್ ವೈಭವ ; ಬೆಂಗಳೂರು ಟೈಮ್ಸ್ ಫ್ಯಾಶನ್ ವೀಕ್ ರ್ಯಾಂಪ್ ಶೋಗೆ ತಾರಾ ತಂಡದ ಮೆರುಗು – ಕಹಳೆ ನ್ಯೂಸ್
ಬೆಂಗಳೂರು : ಭಾರತದ ಉದ್ಯಾನ ನಗರ ಎಂದೇ ಕರೆಯಲ್ಪಡುವ ಬೆಂಗಳೂರು ನಗರದಲ್ಲಿ ಬೆಂಗಳೂರು ಟೈಮ್ಸ್ ಫ್ಯಾಶನ್ ವೀಕ್ 2018 ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಫ್ಯಾಶನ್ ಅಭಿರುಚಿಯ ಯುವ ಸಮೂಹ ಹಾಗೂ ಹಲವು ಅತ್ಯುತ್ತಮ ಡಿಸೈನರ್ ಗಳ ಪ್ರತಿಭಾ ಪ್ರದರ್ಶನವನ್ನು ಅನಾವರಣ ಮಾಡಲಾಯಿತು. ಬೆಂಗಳೂರಿನಲ್ಲಿ ನಡೆದ ಈ ಫ್ಯಾಶನ್ ಹಬ್ಬದಲ್ಲಿ ಫ್ಯಾಶನ್ ಲೋಕದ ದಿಗ್ಗಜರೆಲ್ಲಾ ಒಟ್ಟು ಸೇರಿದ್ದರು. ಹಲವು ಖ್ಯಾತನಾಮರು ಸೇರಿದಂತೆ ಫ್ಯಾಶನ್ ಲೋಕದಲ್ಲಿ ಮಿಂಚಲು ತಯಾರಾದ ಯುವ ಸಮೂಹವೇ...