ಅಂದು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದ ಯುವತಿ, ಇಂದು ಕರ್ನಾಟಕವೇ ಹೆಮ್ಮೆ ಪಡುವ ಅದ್ಭುತ ನಟಿ ದಿವ್ಯಾ ಅಂಚನ್..!! – ಕಹಳೆ ನ್ಯೂಸ್
ಆಕೆ ಬೀಡಿ ಕಟ್ಟುತ್ತಾ, ಮನೆ ಕೆಲಸ, ತೋಟದ ಕೆಲಸ ಜೊತೆಗೆ ಮನೆಯಲ್ಲೇ ಕ್ರಾಫ್ಟ್ ವರ್ಕ್ ಹಾಗೂ ಹೂ ಕಟ್ಟಿ ಬಡತನದಲ್ಲೇ ಜೀವನ ಸಾಗಿಸ್ತಾ ಇದ್ದ ಕರಾವಳಿಯ ಯುವತಿ. ಆದ್ರೆ ಇಂದು ಇಡೀ ಕರ್ನಾಟಕವೇ ಕೊಂಡಾಡುವ ಮನೆಮಗಳು. ಅವರೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾ ಅಂಚನ್. ಹೌದು. ಬಡತನದಲ್ಲೇ ಜೀವನ ಸಾಗಿಸುತ್ತಿದ್ದ ದಿವ್ಯಾ ಈಗ ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಹ ನಟಿಯಾಗಿ ಬೆಳೆದಿದ್ದಾರೆ. ಅಂದಹಾಗೆ ದಿವ್ಯಾ ಅಂಚನ್ ಅವರು ವೇಣೂರಿನ...