ಶ್ರೀರಾಮನವಮಿ ನಿಮಿತ್ತ ಸನಾತನ ಸಂಸ್ಥೆಯಿಂದ ವಿವಿಧೆಡೆ ರಾಮನಾಮ ಸಂಕೀರ್ತನೆ ಆಯೋಜನೆ : ಜಿಲ್ಲಾದ್ಯಂತ ಬಾಲಸಂಸ್ಕಾರ ವರ್ಗಗಳಲ್ಲಿ ಸಾಮೂಹಿಕ ರಾಮನಾಮ ಪಠಣ- ಕಹಳೆ ನ್ಯೂಸ್
ಮಂಗಳೂರು: ಶ್ರೀ ವಿಷ್ಣುವಿನ ಏಳನೆಯ ಅವತಾರ ಶ್ರೀರಾಮ ಇವರ ಜಯಂತಿಯ ಪ್ರಯುಕ್ತ ಶ್ರೀ ರಾಮನವಮಿ ಆಚರಿಸುತ್ತಾರೆ. ಚೈತ್ರ ಶುದ್ಧನವಮಿಗೆ ರಾಮನವಮಿ ಎಂದು ಹೇಳುತ್ತಾರೆ. ಧರ್ಮದ ಎಲ್ಲಾ ಮಿತಿಗಳನ್ನು ಪಾಲಿಸುವ ಅಂದರೆ, ಮರ್ಯಾದಾ ಪುರುಷೋತ್ತಮ , ಆದರ್ಶ ಪುತ್ರ ಆದರ್ಶ ಬಂಧೂ, ಆದರ್ಶ ಪತಿ, ಆದರ್ಶ ಮಿತ್ರ, ಆದರ್ಶ ರಾಜಾ, ಆದರ್ಶ ಶತ್ರು ಹೇಗೆ ಎಲ್ಲಾ ರೀತಿಯಲ್ಲಿಯೂ ಆದರ್ಶ ಆಗಿರುವವರು ಯಾರು ಎಂದು ಕೇಳಿದಾಕ್ಷಣ ಕಣ್ಣು ಎದುರು ಬರುವ ನಾಮ ಎಂದರೆ...