ಬಂಟ್ವಾಳ ರೈಲ್ವೆ ನಿಲ್ದಾಣದ ಬಳಿ ಪಾಳು ಬಿದ್ದಿದ್ದ ರೈಲ್ವೆ ಶೆಡ್ ತೆರವಿಗೆ ಸೂಚನೆ – ಕಹಳೆ ನ್ಯೂಸ್
ಬಂಟ್ವಾಳ: ಬಂಟ್ವಾಳ ರೈಲ್ವೆ ನಿಲ್ದಾಣದ ಬಳಿ ದಶಕಗಳಿಂದ ಕಾರ್ಯಾಚರಿಸುತ್ತಿದ್ದು, ಬಳಿಕ ಪಾಳು ಬಿದ್ದಿದ್ದ ರೈಲ್ವೆ ಶೆಡ್ ಅನ್ನು ತೆರವುಗೊಳಿಸಬೇಕು ಎಂದು ರೈಲ್ವೆ ಇಲಾಖೆಯ ಇಂಜಿನಿಯರ್ ರಾಮಪ್ರಿಯ ಸೂಚಿಸಿದ್ದಾರೆ. ಬಂಟ್ವಾಳ ರೈಲ್ವೆ ನಿಲ್ದಾಣದ ಆಸುಪಾಸಿನಲ್ಲಿ ಇಲಾಖಾ ತಪಾಸಣೆಗೆಂದು ಬಂದಿದ್ದ ಅವರನ್ನು ಸ್ಥಳೀಯರು ಭೇಟಿಯಾಗಿ ರೈಲ್ವೆ ಶೆಡ್ ನಿರುಪಯುಕ್ತವಾಗಿದ್ದು, ಇದರಿಂದ ಸಮಸ್ಯೆಗಳು ಉದ್ಭವಿಸಿವೆ. ಶೀಘ್ರ ತೆರವುಗೊಳಿಸುವಂತೆ ವಿನಂತಿಸಿದರು. ಇದಕ್ಕೆ ಉತ್ತರಿಸಿದ ಅವರು, ಪರಿಶೀಲನೆ ನಡೆಸಿ, ಮುಂದಿನ ದಿನಗಳಲ್ಲಿ ಇದನ್ನು ಜೆಸಿಬಿ ಮೂಲಕ ತೆರವುಗೊಳಿಸಿ...