Sunday, February 2, 2025

ಸುದ್ದಿ

ದಕ್ಷಿಣ ಕನ್ನಡಮಂಗಳೂರುಸುದ್ದಿ

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ. ಅಪಾಯದಿಂದ ಪಾರಾದ ಪ್ರಯಾಣಿಕರು- ಕಹಳೆ ನ್ಯೂಸ್

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಇದ್ದಕಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಬಳಿ ಸಂಭವಿಸಿದೆ. ಶನಿವಾರ ಮಧ್ಯಾಹ್ನದ ಹೊತ್ತಿಗೆ ಘಟನೆ ಸಂಭವಿಸಿದ್ದು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಕಾರು ಚಾಲಕ ಕಾರನ್ನು ನಿಲ್ಲಿಸಿದ್ದು ಕೂಡಲೇ ಕಾರಿನಲ್ಲಿದ್ದವರು ಹೊರ ಬಂದು ಜೀವ ಉಳಿಸಿಕೊಂಡಿದ್ದಾರೆ. ಬೆಂಕಿ ಅವಘಡದಿಂದ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಅವಘಡಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ....
ಬೆಂಗಳೂರುಸುದ್ದಿ

ನಿದ್ದೆ ಮಾಡಿ 9 ಲಕ್ಷ ರೂ ಹಣ ಸಂಪಾದಿಸಿದ ಬೆಂಗಳೂರಿನ ಯುವತಿ! ಹೇಗೆ ಗೊತ್ತಾ..? ಕಹಳೆ ನ್ಯೂಸ್

ಪ್ರತಿ ದಿನ ಸರಿಯಾಗಿ ನಿದ್ರೆ ಮಾಡದ ಜನರನ್ನು ಗಮನದಲ್ಲಿಟ್ಟುಕೊಂಡು ಸ್ಲೀಪ್ ಇಂಟರ್ನ್ಶಿಪ್ ರೂಪಿಸಲಾಗಿದೆ. ಸ್ಪರ್ಧಿಗಳಿಗೆ ಪ್ರತಿ ದಿನ 8 -9 ಗಂಟೆ ನಿದ್ರೆ ಮಾಡುವ ಟಾಸ್ಕ್ ನೀಡಲಾಗುತ್ತದೆ. ಸಾಯಿಶ್ವರಿ ಪಾಟೀಲ್ ಸೇರಿದಂತೆ 12 ಸ್ಪರ್ಧಿಗಳಿಗೆ ಮಲಗಲು ಉತ್ತಮ ಬೆಡ್ ನೀಡಲಾಗಿತ್ತು. ಸ್ಪರ್ಧಿಗಳ ನಿದ್ರೆಯನ್ನು ಟ್ರ್ಯಾಕ್ ಮಾಡಲು ಸ್ಲೀಪ್ ಟ್ರ್ಯಾಕರ್ ಹಾಕಲಾಗಿತ್ತು. 8 -9 ಗಂಟೆ ಹೇಗೆ ಒಳ್ಳೆ ನಿದ್ರೆ ಮಾಡ್ಬೇಕು ಎನ್ನುವ ಬಗ್ಗೆ ತಜ್ಞರಿಂದ ಸ್ಪರ್ಧಿಗಳಿಗೆ ತರಬೇತಿ ಕೂಡ ನೀಡಲಾಗಿತ್ತು....
ಉಡುಪಿದಕ್ಷಿಣ ಕನ್ನಡಮಂಗಳೂರುಸುದ್ದಿ

50 ರೂಪಾಯಿಗೆ ಏರಿಕೆಯಾದ ತೆಂಗಿನ ಕಾಯಿ ಬೆಲೆ ; ರೈತರಿಗೆ ಪ್ರಯೋಜನಕ್ಕೆ ಬಾರದ ಬೆಲೆ ಏರಿಕೆ – ಕಹಳೆ ನ್ಯೂಸ್

ಉಡುಪಿ ಸೆಪ್ಟೆಂಬರ್ 28 : ತೆಂಗಿನ ಕಾಯಿ ಬೆಲೆ ಇದೀಗ ಡಬಲ್ ಆಗಿದೆ. ಕೆಲವು ತಿಂಗಳ ಹಿಂದೆ 25 ರೂಪಾಯಿಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಇದೀಗ 50 ರೂಪಾಯಿಗೆ ಏರಿಕೆಯಾಗಿದೆ ಆದರೆ ರೈತನಿಗೆ ಮಾತ್ರ ಇದರಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಸೆಪ್ಟಂಬರ್‌ ತಿಂಗಳ ಆರಂಭದಿಂದಲೇ ತೆಂಗಿನ ಕಾಯಿಗೆ ಬೇಡಿಕೆ ವ್ಯಕ್ತವಾಗಿದೆ. ಅದರ ಜೊತೆಗೆ ಕೊಬ್ಬರಿ, ಕೊಬ್ಬರಿ ಎಣ್ಣೆಗೂ ಬೇಡಿಕೆ ಬಂದಿದೆ. ಹೀಗಾಗಿ ಕೊಬ್ಬರಿ, ತೆಂಗಿನ ಕಾಯಿ ಬೆಲೆಯಲ್ಲೂ ದಿಢೀರ್ ಏರಿಕೆ ಕಂಡುಬಂದಿದ್ದು, ರೈತರು...
ಅಂತಾರಾಷ್ಟ್ರೀಯಕ್ರೈಮ್ಸುದ್ದಿ

ಪಾಕ್​ನಲ್ಲಿ ಶೇ 82 ಮಹಿಳೆಯರು ತಂದೆ, ಸಹೋದರ, ಅಜ್ಜ, ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೆ ಒಳಾಗುತ್ತಾರೆ : ಪಾಕ್ ಸಂಸದೆ ಷಂಡನಾ ಗುಲ್ಜಾರ್ ಖಾನ್ – ಕಹಳೆ ನ್ಯೂಸ್

ಇಡೀ ಹೆಣ್ಣು ಕುಲವೇ ತಲೆ ತಗ್ಗಿಸುವ ಕೆಲಸವನ್ನು ಪಾಕಿಸ್ತಾನ ಮಾಡುತ್ತಿದೆ. ಪಾಕ್​​ ಸಂಸದೆ ಟಿವಿ ಡಿಬೆಟ್​​ನಲ್ಲಿಟ್ಟ ಆ ಒಂದು ದಾಖಲೆ ಈಗ ಇಡೀ ಪಾಕಿಸ್ತಾನವನ್ನು ತಲೆ ತಗ್ಗಿಸುವಂತೆ ಮಾಡಿದೆ. ಪಾಕ್​​ ಮಹಿಳೆಯರ ಮೇಲೆ ಅವರ ಮನೆಯ ಪುರುಷರೇ ಅತ್ಯಾಚಾರ ಮಾಡಿರುವ ಬಗ್ಗೆ ಎಳೆಎಳೆಯಲ್ಲಿ ದಾಖಲೆ ಇಟ್ಟಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿಪಾಕಿಸ್ತಾನದ ಸಂಸದೆ​​​​ ಒಂದು ಅಚ್ಚರಿ ಹಾಗೂ ಇಡೀ ಪಾಕ್​​​ ನಾಚಿಗೆ ಪಡುವ ದಾಖಲೆಯೊಂದನ್ನು ಟಿವಿ ಡಿಬೆಟ್​​​ ಮೂಲಕ ಜನರ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ತಿರುಪತಿ ಲಡ್ಡು ಅಪವಿತ್ರಗೊಳಿಸಿದವರ ವಿರುದ್ಧ ಪುತ್ತೂರಿನಲ್ಲಿ ದೂರು ದಾಖಲು ಹಿಂದೂ ಧರ್ಮಕ್ಕೆ ಅವಮಾನ ಎಸಗಿದವರ ವಿರುದ್ಧ ಕ್ರಮಕ್ಕೆ ಆಗ್ರಹ-ಕಹಳೆ ನ್ಯೂಸ್

ಪುತ್ತೂರು: ತಿರುಪತಿ ತಿಮ್ಮಪ್ಪ ದೇವರ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿರುವ ಹಿನ್ನೆಲೆಯಲ್ಲಿ ಸಂಬAಧಪಟ್ಟವರ ವಿರುದ್ಧ ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ಖಾಸಗಿ ದೂರು ಸಲ್ಲಿಸಲಾಗಿದೆ. ಪುತ್ತೂರಿನ ಸುಬ್ರಹ್ಮಣ್ಯ ನಟ್ಟೋಜ ಅವರು ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರಿಗೆ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರಿನ ನಾಗರಿಕ ಗಣೇಶ್ ಪ್ರಸಾದ್ ಎ ಹಾಜರಿದ್ದರು.ದೂರಿನ ವಿವರ: ತಿರುಪತಿ ಲಡ್ಡು ತಿರುಪತಿ ವೆಂಕಟೇಶ್ವರ ದೇವರ ಸನ್ನಿಧಿಯಲ್ಲಿ ಕೊಡುವ ಪವಿತ್ರ ಪ್ರಸಾದವಾಗಿದ್ದು, ಅದನ್ನು ರಾಜಕೀಯ ಕಾರಣಗಳಿಗಾಗಿ ಅಪವಿತ್ರಗೊಳಿಸಲಾಗಿದೆ. ತನ್ಮೂಲಕ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರುದ ಪಿಲಿಗೊಬ್ಬು- ಫುಡ್ ಫೆಸ್ಟ್-2024 ಸೀಸನ್-2 ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರಿಗೆ ಆಹ್ವಾನ -ಕಹಳೆ ನ್ಯೂಸ್

ಪುತ್ತೂರು:ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.)ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಜರಗುವ ಪುತ್ತೂರುದ ಪಿಲಿಗೊಬ್ಬು- ಫುಡ್ ಫೆಸ್ಟ್-2024 ಸೀಸನ್-2 ಕಾರ್ಯಕ್ರಮದ ದಿನಾಂಕ 6-10-2024 ರ ಸಂಜೆ 5.00 ಗಂಟೆಯ ಸಭಾ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಲಿರುವ ಕೇಂದ್ರದ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವರಾದ ಎಚ್.ಡಿ ಕುಮಾರಸ್ವಾಮಿಯವರಿಗೆ ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ಸ್ಥಾಪಕಾಧ್ಯಕ್ಷರಾದ ಶ್ರೀ ಸಹಜ್ ರೈ ಬಳಜ್ಜರವರು ಕುಮಾರಸ್ವಾಮಿಯವರ...
ಕ್ರೈಮ್ದಕ್ಷಿಣ ಕನ್ನಡಮಂಗಳೂರುಶಿವಮೊಗ್ಗಸುದ್ದಿ

ಶಿವಮೊಗ್ಗದಿಂದ ಮಂಗಳೂರಿಗೆ ಗೋಸಾಗಾಟ ; ಬಜರಂಗದಳ ಕಾರ್ಯಕರ್ತರಿಂದ ದಾಳಿ, 30 ಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ – ಕಹಳೆ ನ್ಯೂಸ್

ಶಿವಮೊಗ್ಗ: ಶಿವಮೊಗ್ಗದಿಂದ ಮಂಗಳೂರಿಗೆ ಸಾಗಿಸುತ್ತಿದ್ದ 30 ಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ ಬಳಿ ಶುಕ್ರವಾರ (ಸೆ.17) ರಾತ್ರಿ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಿಂದ ಕ್ಯಾಂಟರ್ ಮೂಲಕ ಗೋವುಗಳನ್ನು ಸಾಗಿಸಲಾಗುತ್ತಿತ್ತು. ಒಂದೇ ವಾಹನದಲ್ಲಿ 30 ಕ್ಕೂ ಹೆಚ್ಚು ಜಾನುವಾರುಗಳು ಸಾಗಾಟವಾಗುತ್ತಿತ್ತು. ಎಮ್ಮೆ, ಎತ್ತು, ಹೋರಿ ಸೇರಿದಂತೆ 30 ಕ್ಕೂ ಹೆಚ್ಚು ಜಾನುವಾರುಗಳು ಕ್ಯಾಂಟರ್‌ ನಲ್ಲಿದ್ದವು. ಈ ವೇಳೆ ದಾಳಿ...
ದಕ್ಷಿಣ ಕನ್ನಡಸುದ್ದಿ

ಮಿತ್ತಡ್ಕದ ಮಹಿಳೆ ಕಾಣೆ ; ಬಾವಿಯಲ್ಲಿ ಹುಡುಕಾಟ-ಕಹಳೆ ನ್ಯೂಸ್

ಅರಂತೋಡು: ಮರ್ಕಂಜದ ಮಿತ್ತಡ್ಕ ಮೋಹನ ಅವರ ಪತ್ನಿ ಶೋಭಾಲತಾ ಅವರು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಅವರ ಮನೆಯ ಬಳಿ ಇರುವ ಬಾವಿಯಲ್ಲಿ ಹುಡುಕಾಟ ಶುಕ್ರವಾರ ಆರಂಭಗೊಂಡಿದೆ. ಅವರು ಬಾವಿಗೆ ಹಾರಿರಬಹುದು ಎನ್ನುವ ಶಂಕೆಯಲ್ಲಿ ಬಾವಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಗುರುವಾರ ಅಗ್ನಿಶಾಮಕ ದಳದ ಉಪಸ್ಥಿತಿಯಲ್ಲಿ ಬಾವಿಯ ನೀರು ಖಾಲಿ ಮಾಡಿ ಹುಡುಕುವ ಪ್ರಯತ್ನ ನಡೆಸಲಾಯಿತು. ಆದರೆ ಒಳಭಾಗದಲ್ಲಿ ಬಾವಿ ಜರಿಯುತ್ತಿದ್ದ ಕಾರಣ ಕಾರ್ಯಾಚರಣೆ ನಿಲ್ಲಿಸಲಾಯಿತು. ಸಂಜೆಯ ವೇಳೆಗೆ ಸ್ಥಳಕ್ಕೆ ಬಂದ ಸುಳ್ಯ ತಹಶೀಲ್ದಾರ್...
1 139 140 141 142 143 2,763
Page 141 of 2763