ಅಂತರ್ ಜಿಲ್ಲೆ, ಅಂತರ್ ಕಾಲೇಜು ಮಟ್ಟದ 43ನೇ ಮಾನ್ಸೂನ್ ಚೆಸ್ ಪಂದ್ಯಾಟದ ಸಮಾರೋಪ ಸಮಾರಂಭ-ಕಹಳೆ ನ್ಯೂಸ್
ಪುತ್ತೂರು ಸೆ.21: ಚೆಸ್ ಭಾರತದ ಅತ್ಯಂತ ಪ್ರಾಚೀನ ಕ್ರೀಡೆ. ಕ್ರಮೇಣ ವಿದೇಶಗಳಲ್ಲೂ ಕ್ರೀಡೆಯ ಕೀರ್ತಿ ಪಸರಿಸಿ, ವಿಶ್ವಕೀರ್ತಿಯನ್ನು ಹೊಂದಿದೆ. ಇಂತಹ ವಿಶ್ವವಿಖ್ಯಾತ ಕ್ರೀಡೆಯನ್ನು ಆಡುವ ಕೌಶಲ್ಯವನ್ನು ಅಳವಡಿಸಿಕೊಂಡವರಿಗೆ ಬಾಲ್ಯದಲ್ಲಿಯೇ ಪ್ರೋತ್ಸಾಹಿಸುವ ಕೆಲಸವನ್ನು ವಿವೇಕಾನಂದ ಮಾಡುತ್ತಿದೆ ಎಂದು ಪುತ್ತೂರು ಜಿ. ಎಲ್.ಆಚಾರ್ಯ ಜುವ್ಯೆಲ್ಸ್ ನ ಮಾಲಕ ಲಕ್ಷ್ಮೀಕಾಂತ ಬಿ ಆಚಾರ್ಯ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದ(ಸ್ವಾಯತ್ತ) ಸುವರ್ಣ ಮಹೋತ್ಸವ ವೇದಿಕೆಯಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ಮತ್ತು...