ಮೈಸೂರು ದಸರಾ : ಅರಮನೆಯಲ್ಲಿ ಕಿತ್ತಾಡಿಕೊಂಡ ಆನೆಗಳು, ದಿಕ್ಕಾಪಾಲಾಗಿ ಓಡಿದ ಪ್ರವಾಸಿಗರು..! – ಕಹಳೆ ನ್ಯೂಸ್
ಮೈಸೂರು : ವಿಶ್ವ ವಿಖ್ಯಾತ ಮೈಸೂರು ಅರಮನೆಯಲ್ಲಿ ದಸರಾ ಆನೆಗಳು ಕೆಲ ಹೊತ್ತು ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ರಾತ್ರಿ ವೇಳೆ ನಡೆದಿದ್ದು ಗಜಪಡೆಯ ಆನೆಗಳ ಕಿತ್ತಾಟದಿಂದ (Elephants Fight) ಪ್ರವಾಸಿಗರು ಆತಂಕಕ್ಕೆ ಒಳಗಾಗಿ ದಿಕ್ಕಾಪಾಲಾಗಿ ಓಡಿದ್ದಾರೆ. ಒಂದಕೊಂದು ಕಿತ್ತಾಡಿಕೊಂಡು ಆನೆಗಳು ಚೆಲ್ಲಾಪಿಲ್ಲಿಯಾಗಿ ಓಡಾಡಿವೆ. ಅರಮನೆ ಅಂಗಳ ಬಿಟ್ಟು ಎರಡು ಆನೆಗಳು ರಸ್ತೆಗೆ ನುಗ್ಗಿವೆ. ಹೀಗಾಗಿ ಆನೆ ನಿಯಂತ್ರಿಸಲು ಸ್ವತಃ ಮಾವುತನೇ ವಿಫಲನಾಗಿ ಆನೆ ಬಿಟ್ಟು ಕೆಳಗೆ ಇಳಿದಿದ್ದಾನೆ. ಆಹಾರ...