ಅಂಬಿಕಾ ವಿದ್ಯಾಲಯದಲ್ಲಿ ವಿಶಿಷ್ಟ ರೀತಿಯಲ್ಲಿ ಹಿಂದಿ ದಿವಸ್ ಆಚರಣೆ-ಕಹಳೆ ನ್ಯೂಸ್
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಶನಿವಾರ ಹಿಂದಿ ದಿವಸ್ ಆಚರಣೆ ನಡೆಯಿತು. ಪ್ರಸಿದ್ಧ ಸಾಹಿತಿಗಳ ವೇಷ ಧರಿಸಿ ಬಂದು ಅವರನ್ನು ಎಲ್ಲರಿಗೂ ಪರಿಚಯಿಸುವ ಮೂಲಕ ವಿಶಿಷ್ಟವಾದ ಕರ‍್ಯಕ್ರಮ ಹಮ್ಮಿಕೊಳ್ಳಲಾಯಿತು. ಶಾಲಾ ಉಪಪ್ರಾಂಶುಪಾಲೆ ಸುಜನಿ ಬರ‍್ಕರ್ ಅವರು ಹಿಂದಿ ದಿವಸ್ ದಂದು ಕೊಡಮಾಡುವ ಪ್ರಶಸ್ತಿಗಳ ಬಗ್ಗೆ ಹೇಳುತ್ತಾ ಭಾಷಾ ವೈಶಿಷ್ಟ್ಯವನ್ನು ತಿಳಿಸಿದರು. ಹಿಂದಿ ಶಿಕ್ಷಕಿ ಕುಸುಮ ಮಾತನಾಡಿ ಸಂತ ಕಬೀರರ ದೋಹೆಯ...