ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲೀಗ ಪ್ರಪಂಚ ದರ್ಶನ! 195 ರಾಷ್ಟçಗಳ ರೇಖಾಚಿತ್ರ ಬಿಡಿಸಿ, ಗುರುತಿಸುವ ನಾಲ್ಕನೇ ತರಗತಿ ವಿದ್ಯಾರ್ಥಿ-ಕಹಳೆ ನ್ಯೂಸ್
ಪುತ್ತೂರು: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಭಾರತದ ಭೂಪಟ ಬಿಡಿಸುವ ಪ್ರಶ್ನೆ ಬರುವುದು ಸಾಮಾನ್ಯ. ಅದಕ್ಕಾಗಿ ಕೆಲವು ವಿದ್ಯಾರ್ಥಿಗಳು ಮನೆಯಲ್ಲಿ ಭಾರತದ ಭೂಪಟವನ್ನು ಪುಸ್ತಕದ ಹಾಳೆಗಳಲ್ಲಿ ಚಿತ್ರಿಸುತ್ತಾ, ರಬ್ಬರಿಂದ ಒರೆಸುತ್ತಾ, ಪುನಃ ಪುನಃ ಪ್ರಯತ್ನಗೈಯುತ್ತಾ ಅಭ್ಯಾಸ ಮಾಡುವುದಿದೆ. ಹೀಗಿರುವಾಗ ಭಾರತದೊಂದಿಗೆ ಸುತ್ತಮುತ್ತಲಿನ ರಾಷ್ಟçಗಳಾದ ಚೀನಾ, ಪಾಕಿಸ್ಥಾನ, ಬಾಂಗ್ಲಾಗಳನ್ನೂ ಚಿತ್ರಿಸಬೇಕೆಂದರೆ ಅನೇಕರು ಶಾಲೆಗೇ ಗುಡ್ ಬೈ ಹೇಳುವ ಅಪಾಯವಿದೆ! ಆದರೆ ಇಲ್ಲೊಬ್ಬ ವಿದ್ಯಾರ್ಥಿ ಇದ್ದಾನೆ. ಈತ ಭಾರತದೊಂದಿಗೆ ಸ್ಥಳೀಯ ರಾಷ್ಟçಗಳನ್ನೂ ಚಿತ್ರಿಸುತ್ತಾನೆ....