ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆಟಿ ಅಮವಾಸ್ಯೆ ತೀರ್ಥಸ್ನಾನಕ್ಕೆ ಹರಿದು ಬಂದ ಭಕ್ತ ಜನಸಾಗರ-ಕಹಳೆ ನ್ಯೂಸ್
ಬಂಟ್ವಾಳ : ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕಾರಿಂಜ ಪುರಾಣ ಪ್ರಸಿದ್ಧ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ರವಿವಾರ ಆಟಿ ಅಮವಾಸ್ಯೆ ಪ್ರಯುಕ್ತ ತೀರ್ಥಸ್ನಾನಕ್ಕೆ ಭಕ್ತ ಜನಸಾಗರ ಹರಿದು ಬಂತು. ಸಾವಿರಾರು ಭಕ್ತಾದಿಗಳು ಆಗಮಿಸಿ ಇಲ್ಲಿನ ಗದಾತೀರ್ಥ ಎಂಬ ಬೃಹತ್ ಕೆರೆಯಲ್ಲಿ ತೀರ್ಥಸ್ನಾನ ಮಾಡಿ ಬಾಗಿನ ಅರ್ಪಿಸಿದರು. ಬಳಿಕ ಶ್ರೀ ಪಾರ್ವತೀ-ಪರಮೇಶ್ವರರನ್ನು ದರ್ಶಿಸಿ ಪ್ರಸಾದ ಸ್ವೀಕರಿಸಿದರು. ಆಟಿ ಅಮವಾಸ್ಯೆ ಸಂದರ್ಭದಲ್ಲಿ ನವದಂಪತಿಗಳು ಬಾಗಿನ ಅರ್ಪಿಸಿದರೆ ದಾಂಪತ್ಯ ಜೀವನ ಒಳಿತಾಗುವುದು ಮತ್ತು...