ಉಡುಪಿ ಶಾಸಕರ ಕಾರ್ಯವೈಖರಿಗೆ ಕಾಂಗ್ರೆಸ್ ನಾಯಕರ ಸರ್ಟಿಫಿಕೇಟ್ ಅಗತ್ಯವಿಲ್ಲ : ಜನತೆಯ ಧ್ವನಿಯಾಗಿ ಶಾಸಕರು ಉಸ್ತುವಾರಿ ಸಚಿವರನ್ನು ಪ್ರಶ್ನಿಸುವುದೇ ತಪ್ಪೇ..??? : ಜಿಲ್ಲೆಯಲ್ಲಿ 5 ಬಿಜೆಪಿ ಶಾಸಕರು ಎಂಬ ಕಾರಣಕ್ಕೆ ಸಚಿವರ ಸರ್ವಾಧಿಕಾರಿ ಧೋರಣೆ ಸರಿಯೇ..??? : ಸಂಧ್ಯಾ ರಮೇಶ್ ಆಕ್ರೋಶ- ಕಹಳೆ ನ್ಯೂಸ್
ಉಡುಪಿ ಜಿಲ್ಲೆಯ ಬಗ್ಗೆ ನಿರಂತರವಾಗಿ ನಿರ್ಲಕ್ಷ್ಯ ವಹಿಸುತ್ತ ಸ್ವಪಕ್ಷದ ಕಾರ್ಯಕರ್ತರ ಗೋ ಬ್ಯಾಕ್ ಅಭಿಯಾನಕ್ಕೆ ಓಡೋಡಿ ಬಂದು ಕಾಟಾಚಾರಕ್ಕೆ ಪ್ರಾಕೃತಿಕ ವಿಕೋಪದ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡೆಯನ್ನು ಖಂಡಿಸಿದ ಉಡುಪಿ ಶಾಸಕರ ವಿರುದ್ಧ ಕಾಂಗ್ರೆಸ್ ಮುಖಂಡರು ಹತಾಶ ಹೇಳಿಕೆ ನೀಡುತ್ತಿದ್ದು, ಶಾಸಕರ ಕಾರ್ಯ ವೈಖರಿ, ಹಾಗೂ ಸಿದ್ಧಾಂತ ವಿಚಾರದಲ್ಲಿನ ಬದ್ಧತೆಯ ಬಗ್ಗೆ ಕಾಂಗ್ರೆಸ್ ನಾಯಕರ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ...