Recent Posts

Sunday, February 9, 2025

ಸುದ್ದಿ

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಯುವವಾಹಿನಿ ಬಂಟ್ವಾಳ ವತಿಯಿಂದ ಆ.11ರಂದು ತುಳು ಆಶು ಭಾಷಣ ಸ್ಪರ್ಧೆ – ಕಹಳೆ ನ್ಯೂಸ್

ಬಂಟ್ವಾಳ: ತುಳು ಸಾಹಿತ್ಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 'ತುಳು ಆಶುಭಾಷಣ ಸ್ಪರ್ಧೆ'ಯನ್ನು ಆಗಸ್ಟ್ 11, 2024 ರಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಗಾಣದಪಡ್ಪು, ಬಿ.ಸಿ.ರೋಡ್ ನಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರನ್ನು ನಗದು ಬಹುಮಾನದೊಂದಿಗೆ ಅಭಿನಂದಿಸಲಾಗುವುದು. ಆಸಕ್ತರು ಆಗಸ್ಟ್ 06 ರ ಮುಂಚಿತವಾಗಿ ಮೊಬೈಲ್ ಸಂಖ್ಯೆ : 9880626533 ಕರೆ ಮಾಡಿ ನೊಂದಾಯಿಸಿಕೊಳ್ಳಿ. ಎಂದು ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ....
ಉಡುಪಿಸುದ್ದಿ

ಉಡುಪಿಯಲ್ಲಿ ಧಾರಾಕಾರ ಮಳೆ: ಹಲವು ಮನೆಗಳು ಜಲಾವೃತ : ಕರಂಬಳ್ಳಿ, ಮೂಡುನಿಡಂಬೂರು, ಕೊಡವೂರು ಭಾಗದಲ್ಲಿ ಕೃತಕ ನೆರೆ – ಕಹಳೆ ನ್ಯೂಸ್

ಉಡುಪಿ: ಎರಡು ದಿನಗಳಿಂದ ಸುರಿಯುತ್ತಿರುವ ರಣಮಳೆಗೆ ಉಡುಪಿ ನಗರ ತತ್ತರಿಸಿ ಹೋಗಿದೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹಲವೆಡೆ ಮನೆಗಳು ಜಲಾವೃತಗೊಂಡಿದೆ. ಉಡುಪಿಯ ಕರಂಬಳ್ಳಿ, ಮೂಡುನಿಡಂಬೂರು, ಕೊಡವೂರು ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಕರಂಬಳ್ಳಿ ಭಾಗದಲ್ಲಿ, ಬನ್ನಂಜೆ ಮೂಡನಿಡಂಬೂರು ಕೆಲವು ಮನೆಗಳು ಜಲಾವೃತಗೊಂಡಿವೆ. ಇಂದ್ರಾಣಿ ನದಿ ಹರಿಯುವ ಪಾತ್ರದಲ್ಲಿ ಗುಂಡಿಬೈಲು ಭಾಗದಲ್ಲಿ ತೋಟ, ಗದ್ದೆಗಳು ಜಲಾವೃತಗೊಂಡಿದೆ. ಕರಂಬಳ್ಳಿ ವೆಂಕಟರಮಣ ಲೇಔಟ್‌ನ ಹಲವು ಮನೆಗಳು ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ. ಭಾರಿ ಮಳೆಯಿಂದ ನಗರದಲ್ಲಿನ...
ಉಡುಪಿಸುದ್ದಿ

ಉಡುಪಿ: ‘ಮದರೆಂಗಿದ ರಂಗ್’ ತುಳು ಸಾಂಪ್ರದಾಯಿಕ ಸ್ಪರ್ಧೆ ಉದ್ಘಾಟನೆ – ಕಹಳೆ ನ್ಯೂಸ್

ಉಡುಪಿ: ತುಳುಕೂಟ ಉಡುಪಿ ವತಿಯಿಂದ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಉಡುಪಿ ಜಿಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ತುಳು ಸಾಂಪ್ರದಾಯಿಕ ಸ್ಪರ್ಧೆ ‘ಮದರೆಂಗಿದ ರಂಗ್’ನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಮಲ್ಪೆ ಪರ್ಸಿನ್ ಮೀನುಗಾರರ ಸಂಘದದ ಅಧ್ಯಕ್ಷೆ ನಾಗರಾಜ್ ಸುವರ್ಣ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ,...
ಕಾಸರಗೋಡುಸುದ್ದಿ

ಕಾಸರಗೋಡು: ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆಯ ಪ್ರಥಮ ತ್ರೈಮಾಸಿಕದ ಪ್ರಗತಿ ಪರಿಶೀಲನಾ ಸಭೆ – ಕಹಳೆ ನ್ಯೂಸ್

ಕಾಸರಗೋಡು ವಲಯದ ಕೂಡ್ಲು ವನಿತಾ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂರ ಅಧ್ಯಕ್ಷತೆಯಲ್ಲಿ ನಡೆಯಿತು. ದ.ಕ. ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ, ನಿರ್ದೇಶಕರೂ ಆದ ಪ್ರವೀಣ್ ಕುಮಾರ್ ಜನಜಾಗೃತಿ ಮತ್ತು ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾತನಾಡಿ ಕನಿಷ್ಠ 6 ಮಂದಿ ಪದಾದಿಕಾರಿಗಳನ್ನು ಆಯ್ಕೆ ಮಾಡುವ ಬಗ್ಗೆ, ನವಜೀವನ ಸಮಿತಿಗಳ ಬಲವರ್ಧನೆಗಾಗಿ ಪೋಷಕರನ್ನು ಆಯ್ಕೆ ಮಾಡಿರುವ ಬಗ್ಗೆ, ಕಳೆದ ಮೂರು ತಿಂಗಳ ಜನಜಾಗೃತಿ ಕಾರ್ಯಕ್ರಮಗಳ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಜು. 09ರಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಇವರ ಸಾರಥ್ಯದಲ್ಲಿ ಅಡಿಕೆ ತೋಟಗಳಿಗೆ ಬಾಧಿಸುತ್ತಿರುವ ರೋಗಗಳು ಮತ್ತು ಅಡಿಕೆ ಕೃಷಿಕರ ಇತರ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಇವರ ಸಾರಥ್ಯದಲ್ಲಿ ತೋಟಗಾರಿಕೆ ಇಲಾಖೆ ಪುತ್ತೂರು ಇವರ ಸಹಭಾಗಿತ್ವದಲ್ಲಿ ಅಡಿಕೆ ತೋಟಗಳಿಗೆ ಬಾಧಿಸುತ್ತಿರುವ ರೋಗಗಳು ಮತ್ತು ಅಡಿಕೆ ಕೃಷಿಕರ ಇತರ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯ ಕಾರ್ಯಕ್ರಮವು ಜು. 09ರಂದು ಪಂಜಿಗುಡ್ಡೆ ಈಶ್ವರ ಭಟ್ ಅವರ ಮನೆಯಲ್ಲಿ ನಡೆಯಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಗತಿಪರ ಕೃಷಿಕರಾದ ರಮೇಶ್ ದೇಲಂಪಾಡಿ ವಿಚಾರ ಮಂಡಿಸಲಿದ್ದಾರೆ....
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ನರಿಕೊಂಬು ಯುವಕಮಂಡಲ (ರಿ ) ಇದರ ವತಿಯಿಂದ ಮೊಗರ್ನಾಡ್ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದ ಸಹಯೋಗದಲ್ಲಿ ಗಿಡ ನಾಟಿ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನರಿಕೊಂಬು ಯುವಕಮಂಡಲ (ರಿ ) ಇದರ ವತಿಯಿಂದ ಮೊಗರ್ನಾಡ್ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದ ಸಹಯೋಗದಲ್ಲಿ ದೇವಸ್ಥಾನದ ವಠಾರದಲ್ಲಿ ವಿವಿಧ ಬಗೆಯ ಸಸಿಗಳನ್ನು ನಾಟಿ ಮಾಡಲಾಯಿತು ನೆಡಲಾಯಿತು. ಈ ಸಂದರ್ಭದಲ್ಲಿ ನಿವೃತ ಉಪನ್ಯಾಸಕರಾದ ಮೊಗರ್ನಾಡ್ ಸತೀಶ್ ಭಟ್, ನರಿಕೊಂಬು ಯುವಕ ಮಂಡಲದ ಅಧ್ಯಕ್ಷರಾದ ಮೋಹನ್ ಕುಲಾಲ್, ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು....
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಬೋಧನಾ ಸಾಮರ್ಥ್ಯ ಉತ್ತೇಜನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಮನುಷ್ಯನೊಳಗೆ ಅಪರಿಮಿತವಾದ ಸಾಮರ್ಥ್ಯಗಳಿವೆ. ಹಿಂದಿನ ಮತ್ತು ಮುಂದಿನ ಎರಡೂ ಜೀವನಗಳನ್ನು ನಿಖರವಾಗಿ ಹೇಳಬಲ್ಲ ಶಕ್ತಿಗಳಿವೆ. ಒಮ್ಮೆ ಆ ಬಗೆಗಿನ ಅಧ್ಯಯನ, ಆಸಕ್ತಿ ಬೆಳೆಸಿಕೊಂಡರೆ ಅದರಿಂದ ವಿಮುಖರಾಗುವುದು ಕಷ್ಟ. ಅದೊಂದು ಅದ್ಭುತ ಮನೋಲೋಕ. ಅದರೊಳಗೆ ತಜ್ಞರಾದವರು ಪ್ರವೇಶಿಸಿ ಮನುಷ್ಯನನ್ನು ಸಾಧನೆಯ ಪಥದೆಡೆಗೆ ಅಡಿಯಿಡುವಂತೆ ಪ್ರೇರೇಪಿಸುವುದಕ್ಕೆ ಸಾಧ್ಯ ಎಂದು ಬೆಂಗಳೂರಿನ ಸಮ್ಮೋಹಿನಿ ತಜ್ಞ, ಕುಂಡಲಿನಿ ಯೋಗ ಗುರು ಡಾ.ರಾಮಚಂದ್ರ ಗುರೂಜಿ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ...
ಕ್ರೈಮ್ಬೆಂಗಳೂರುಸುದ್ದಿ

ಬೆಂಗಳೂರಿನಲ್ಲಿ ಮದರ್ ಥೆರೆಸಾ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ದಿಯಾ ಆತ್ಮಹತ್ಯೆ – ಕಹಳೆ ನ್ಯೂಸ್

ಬೆಂಗಳೂರು: ಬೆಂಗಳೂರಿನಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಿಯಾ ಮಂಡೋಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಪಶ್ಚಿಮ ಬಂಗಾಳ‌ ಮೂಲದ ದಿಯಾ ಮಂಡೋಲ್‌ ಮದರ್ ಥೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು. ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಹಪಾಠಿಗಳು ರೂಮಿಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ...
1 242 243 244 245 246 2,771
Page 244 of 2771