ಜುಬೈರ್ ಮಕ್ಕಳನ್ನು ಶೈಕ್ಷಣಿಕ ದತ್ತು ಪಡೆದುಕೊಂಡ ಬಿಜೆಪಿ ಮುಖಂಡ.
ಉಳ್ಳಾಲ: ಮೃತ ಜುಬೈರ್ ಅವರು ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾಗಿದ್ದಾರೆ. ದಿನಗೂಲಿ ನಿರ್ವಹಿಸಿ ಕುಟುಂಬ ಸಲಹುತ್ತಿದ್ದ ಜುಬೈರ್ ಅವರ ಸಾವಿನಿಂದ ಕುಟುಂಬದ ಆಧಾರ ಸ್ತಂಭ ಕಳಚಿದಂತಾಗಿದೆ. ಅಲ್ಲದೆ ಇದರಿಂದ ಜುಬೈರ್ ಅವರ ಶಾಲೆ ಮತ್ತು ಕಾಲೇಜಿಗೆ ತೆರಳುತ್ತಿರುವ ಮಕ್ಕಳ ವಿದ್ಯಾಭ್ಯಾಸದಲ್ಲಿ ಮೊಟಕುಗೊಳಿಸುವ ಸಾಧ್ಯತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಮುನೀರ್ ಬಾವಾ ಹಾಜಿ ಅವರು ಜುಬೈರ್ ಅವರ ಆರು ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುವುದಾಗಿ ತಿಳಿಸಿ...