ಮಂಗಳೂರಿನಲ್ಲಿ ಬಿ.ಜೆ.ಪಿ. ಚಾಣಕ್ಯನಿಗೆ ಭವ್ಯ ಸ್ವಾಗತ.
ಮಂಗಳೂರು : ರಾಜ್ಯ ಮತ್ತು ಕೇರಳಾದ ಮೇಲೆ ಕಣ್ಣಿಟ್ಟಿರುವ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿನ್ನೆ ತಡರಾತ್ರಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅವರನ್ನು ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್, ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಎಂ.ಎಲ್.ಎ. ನಾಗರಾಜ್ ಶೆಟ್ಟಿ , ಕೃಷ್ಣ ಪಾಲೆಮಾರ್, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಹರೀಶ್ ಪೂಂಜಾ ಸೇರಿದಂತೆ ಕರಾವಳಿಯ ನಾಯಕರ ದಂಡೇ ಸೇರಿ ಭವ್ಯ ಸಾಗತ ನೀಡಿದರು....