ವಿದ್ಯಾರ್ಥಿನಿ ಸಾವಿಗೆ ಸರಕಾರವೇ ಕಾರಣ | ತುಟಿಬಿಚ್ಚದ ಶಾಸಕಿ ಶಕುಂತಲಾ ಶೆಟ್ಟಿಗೆ ಛೀಮಾರಿ !
ಪುತ್ತೂರು : ಕಬಕದ ವಿದ್ಯಾಪುರ ನಿವಾಸಿ ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಕಾಂ.ವಿದ್ಯಾರ್ಥಿನಿ ಪೂಜಾ ಕಿಡ್ನಿ ವೈಪಲ್ಯದಿಂದ ಬಳಲುತಿದ್ದು ಏಕಾಏಕಿ ನಿನ್ನೆ ಬೆಳಗ್ಗೆ ರೋಗ ಉಲ್ಬಣಗೊಂಡು ಸಾವನ್ನಪ್ಪಿದ್ದಾಳೆ. ಹಿನ್ನಲೆ : ಪೂಜಾ ಈಗಾಗಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ವಾರಕ್ಕೆ 2 ಬಾರಿ ಡಯಲಿಸೀಸಸ್ ಮಾಡಲಾಗುತಿತ್ತು, ಆದರೆ, ವೈದ್ಯರ ಮುಷ್ಕರದಿಂದಾಗಿ ಡಯಲಿಸಸ್ ನೀಡಲಾಗಿಲ್ಲ. ಪೂಜಾಳನ್ನು ಎಂದಿನಂತೆ ಪುತ್ತೂರು ಸಿಟಿ ಅಸ್ಪತ್ರೆಗೆ ಕರಕೊಂಡು ಹೋದಾಗ ಅಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ನೀಡಲಾಗಲಿಲ್ಲ. ಇದರ ಪರಿಣಾಮ...