ನೆಲ್ಲಿತೀರ್ಥ ಸೋಮನಾಥೇಶ್ವರ ಕ್ಷೇತ್ರ | ಜಾಬಾಲಿ ಮಹರ್ಷಿಗಳ ತಪೋಭೂಮಿ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪುರಾತನ ಐತಿಹಾಸಿಕ ದೇವಾಲಯಗಳಲ್ಲಿ ನೆಲ್ಲಿತೀರ್ಥ ಸೋಮಾನಾಥೇಶ್ವರ ದೇವಸ್ಥಾನವು ಒಂದಾಗಿದ್ದು ಪ್ರಾಮುಖ್ಯತೆ ಪಡೆದಿದೆ. ಈ ದೇವಸ್ಥಾನವು ಮಂಗಳೂರಿನಿಂದ ಸುಮಾರು 31ಕಿ.ಮೀ ದೂರವಿರುವ ಹಚ್ಚಹಸುರಿನ ಪ್ರಕೃತಿ ಮಡಿಲ್ಲಲಿದೆ. ಇಂದು ನೆಲ್ಲಿತೀರ್ಥ ಕ್ಷೇತ್ರವು ಭಕ್ತರ, ಪ್ರವಾಸಿಗರ ಪ್ರಮುಖ ಆರಾಧ್ಯ ಕೇಂದ್ರಗಳಲ್ಲಿ ಒಂದಾಗಿದೆ. ನೆಲ್ಲಿತೀರ್ಥ ಗುಹೆಯು ಭಕ್ತರ ದರ್ಶನಕ್ಕೆ ಈ ವರ್ಷ ಅಕ್ಟೋಬರ್ 17ರ ತುಲಾಸಂಕ್ರಮಣದಂದು ತೆರೆದುಕೊಳ್ಳುತ್ತದೆ. ಗುಹೆಯ ವೈಶಿಷ್ಟ್ಯ: ನೆಲ್ಲಿತೀರ್ಥ ಸೋಮನಾಥೇಶ್ವರ ದೇವಾಲಯದ ಪ್ರಮುಖ ಆಕರ್ಷಣೆ...