ಹೆಲ್ಮೆಟ್ ಹಾಕದ್ದಕ್ಕೆ ಕಾರು ಚಾಲಕನಿಗೆ ಹುಬ್ಬಳ್ಳಿ ಪೊಲೀಸರಿಂದ ದಂಡ!
ಹುಬ್ಬಳ್ಳಿ: ಬೈಕ್ ಸವಾರರು ಹೆಲ್ಮೆಟ್ ಹಾಕದೇ ಇದ್ದರೆ ಸಂಚಾರಿ ಪೊಲೀಸರು ನೋಟಿಸ್ ನೀಡೋದು ಸಾಮಾನ್ಯ. ಆದರೆ ಹುಬ್ಬಳ್ಳಿಯಲ್ಲಿ ಕಾರು ಚಾಲಕರೊಬ್ಬರಿಗೆ ಸಂಚಾರಿ ಪೊಲೀಸರು ಹೆಲ್ಮೆಟ್ ಹಾಕಲಿಲ್ಲ ಎಂದು ನೋಟಿಸ್ ನೀಡಿ, ದಂಡ ಕಟ್ಟಿಸಿಕೊಂಡು ಎಡವಟ್ಟು ಮಾಡಿದ್ದಾರೆ. ಹೌದು, ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸರು ಭಾನುವಾರ ಸಂಜೆ ರವಿ ಎಂಬುವವರ ಕಾರನ್ನು ತಡೆದಿದ್ದಾರೆ. ಹಳೆಯ ಬಸ್ ನಿಲ್ದಾಣದ ಬಳಿ ಉತ್ತರ ಸಂಚಾರಿ ಪೊಲೀಸರು ರವಿ ಕಾಂಬಳೆರನ್ನು ನಿಲ್ಲಿಸಿ ವಿಚಾರಣೆ ನಡೆಸಿದಾಗ ಎಲ್ಲ ಡಾಕ್ಯುಮೆಂಟ್ ಸರಿಯಾಗಿತ್ತು. ಆದ್ದರೂ...