ಬೆಳ್ತಂಗಡಿ ತಾಲೂಕಿನ ಭಾರತೀಯ ಗೋಪರಿವಾರ ರಚನೆ ಕುರಿತು ಪೂರ್ವ ಸಿದ್ದತಾ ಸಭೆ.
ಬೆಳ್ತಂಗಡಿ: ಭಾರತೀಯ ಗೋತಳಿಗಳ ಉಳಿವು ಬೆಳವುಗಳಿಗಾಗಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ಗೋಪರಿವಾರ ರಚನೆಯ ಪೂರ್ವ ಸಿದ್ದತಾ ಸಭೆಯು ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ 08/10/2017ರಂದು ನಡೆಯಿತು. ಕಾಂತಾಜೆ ಈಶ್ವರ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯ ಗೋಪರಿವಾರ ಸಮಿತಿಯ ಮಾಧ್ಯಮ ವಿಭಾಗದ ಅಧ್ಯಕ್ಷ ಉದಯಶಂಕರ ಭಟ್ ಮಿತ್ತೂರು ದಿಕ್ಸೂಚಿ ಮಾತುಗಳನ್ನಾಡಿದರು. ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಗೋಪರಿವಾರ...