ಲೂಸ್ ಮಾದ ಮ್ಯಾರೀಡ್ ಲೈಫ್ ಆರಂಭ
ಬೆಂಗಳೂರು : ನಟ "ಲೂಸ್ ಮಾದ' ಯೋಗಿ ಮದುವೆ ಇವತ್ತು ಬೆಳಿಗ್ಗೆ ಮುಗಿದಿದೆ. ಆರ್.ಆರ್.ನಗರ ಸಮೀಪದ ಕರಿಷ್ಮಾ ಹಿಲ್ಸ್ ರಸ್ತೆಯಲ್ಲಿರುವ ಶ್ರೀ ಕನ್ವೆನ್ಶನ್ ಹಾಲ್‌ನಲ್ಲಿ ಇಂದು ಬೆಳಿಗ್ಗೆಯ ಶುಭ ಮುಹೂರ್ತದಲ್ಲಿ, ಸಾಹಿತ್ಯ ಅವರನ್ನು ಮದುವೆಯಾಗಿದ್ದಾರೆ ಯೋಗಿ. ಈ ಸಂದರ್ಭದಲ್ಲಿ ಎರಡೂ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಹಾಜರಿದ್ದರು. ನಿನ್ನೆ ಸಂಜೆಯೇ ಕಲ್ಯಾಣ ಮಂಟಪಕ್ಕೆ ತೆರಳಿದ್ದ ಯೋಗಿ ಕುಟುಂಬವು ಮದುವೆ ಮುಂಚಿನ ಹಲವು ಶಾಸ್ತ್ರಗಳನ್ನು ಮುಗಿಸಿತು. ಹರಿಶಿಣ ಹಚ್ಚುವ ಶಾಸ್ತ್ರದೊಂದಿಗೆ ಶುರುವಾದ...