ಅಂಬಿಕಾ ಸಿಬಿಎಸ್ಇ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ;ದೈನಂದಿನ ಜೀವನದ ಎಲ್ಲಾ ಚಟುವಟಿಕೆಯಲ್ಲಿ ಗಣಿತ ಬೆರೆತುಹೋಗಿದೆ : ಸುಬ್ರಹ್ಮಣ್ಯ-ಕಹಳೆ ನ್ಯೂಸ್
ಪುತ್ತೂರು: ಶ್ರೇಷ್ಠ ಭಾರತೀಯ ಗಣಿತ ತಜ್ಞ ರಾಮಾನುಜನ್ ಅವರು ಗಣಿತದ ಬಗ್ಗೆ ಅಪಾರವಾಗಿ ಒಲವನ್ನು ಹೊಂದಿದ್ದವರು. ಸಂಖ್ಯೆಯ ವಿಭಾಗವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಿ ತೋರಿಸಿದವರಲ್ಲದೇ, ಅನೇಕ ರೀತಿಯ ಪ್ರಮೇಯವನ್ನು ರಚಿಸಿದವರು ಎಂದು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಸುಬ್ರಹ್ಮಣ್ಯ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ವಿದ್ಯಾಸಂಸ್ಥೆಯಲ್ಲಿ ಸೋಮವಾರ ನಡೆಸಿದ ಗಣಿತ ದಿನಾಚರಣೆಯ ಮುಖ್ಯ...