Tuesday, January 21, 2025

ಸುದ್ದಿ

ದಕ್ಷಿಣ ಕನ್ನಡಪುತ್ತೂರುಸುದ್ದಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ-ಕಹಳೆ ನ್ಯೂಸ್

ಪುತ್ತೂರು:ಕ್ರೀಡೆಯು ಒಂದು ಪ್ರಮುಖ ಚಟುವಟಿಕೆಯಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾಳಜಿ ವಹಿಸಲು ಮತ್ತು ಅವರಲ್ಲಿ ಆರೋಗ್ಯಕರ ಸ್ಪರ್ಧೆಯ ಪ್ರಜ್ಞೆಯನ್ನು ಬೆಳೆಸಲು ಇದನ್ನು ಕೈಗೊಳ್ಳಬೇಕು.ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿದೆ. ಇಂತಹ ಸಮರ್ಥ ಮನಸ್ಸಿನ ನಾಗರಿಕರೇ ಸ್ವಸ್ಥ ಸಮಾಜದ ರೂವಾರಿಗಳು.ಅದಕ್ಕಾಗಿ ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿರಬೇಕು. ಎಂದು ಎಸ್.ಜಿ.ಎಂ. ಪ್ರೌಢಶಾಲೆ ಸರ್ವೆ ಇದರ ನಿವೃತ್ತ ಶಿಕ್ಷಕರಾದ ಶ್ರೀನಿವಾಸ ಹೆಚ್.ಬಿ. ಇವರು ಹೇಳಿದರು.ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ 2024-25 ನೇ ಸಾಲಿನ ವಾರ್ಷಿಕ...
ಉಡುಪಿರಾಜಕೀಯಸುದ್ದಿ

ಕೊರಗ ಸಮುದಾಯದ 10 ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಅದೇಶ ಪತ್ರ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿತರಣೆ-ಕಹಳೆ ನ್ಯೂಸ್

ಉಡುಪಿ: ರಾಜೀವ ಗಾಂಧಿ ವಸತಿ ನಿಗಮದಿಂದ ಕೊರಗ ಸಮುದಾಯದ 10 ಫಲಾನುಭವಿಗಳಿಗೆ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಂಜೂರಾದ ಮನೆ ಮಂಜೂರಾತಿ ಮತ್ತು ಕಾಮಗಾರಿ ಅದೇಶ ಪತ್ರವನ್ನು ಇಂದು ದಿನಾಂಕ 24-12-2024 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ತಮ್ಮ ಹಿರಿಯಡಕ ಶಾಸಕರ ಕಚೇರಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ, ಉಪಾಧ್ಯಕ್ಷರಾದ ಹರೀಶ್ ಸಾಲಿಯಾನ್, ಕೊಡಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂದೀಪ, ಬೈರಂಪಳ್ಳಿ...
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ರಾಷ್ಟ್ರ ಮಟ್ಟದಲ್ಲಿ ಬಹುಮಾನ ಗಳಿಸಿದ ಅಂಬಿಕಾ ವಿದ್ಯಾರ್ಥಿನಿಗೆ ಅಭಿನಂದನೆ -ಕಹಳೆ ನ್ಯೂಸ್

ಪುತ್ತೂರು: ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯು ಗುಜರಾತ್‌ನ ರಾಜಕೋಟ್‌ನಲ್ಲಿ ನ.24ರಿಂದ 30ರ ವರೆಗೆ ನಡೆಸಿದ 68ನೇ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನಗರದ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪ್ರತೀಕ್ಷಾ ಶೆಣೈ ಅವರನ್ನು ಸಂಸ್ಥೆಯ ವತಿಯಿಂದ ಗುರುವಾರ ಅಭಿನಂದಿಸಿ ಸನ್ಮಾನಿಸಲಾಯಿತು. ಪುತ್ತೂರಿನ ನರಸಿಂಹ ಶೆಣೈ ಮತ್ತು ಶ್ರೀಲಕ್ಷ್ಮಿ.ಎನ್. ಶೆಣೈಯವರ ಪುತ್ರಿಯಾದ ಇವರು ರಾಜ್‌ಕೋಟ್‌ನ ಸರ್ದಾರ್ವಲ್ಲಭಬಾಯಿ ಪಟೇಲ್ ಈಜುಕೊಳದಲ್ಲಿ ನಡೆದ ಸ್ಪರ್ಧೆಯಲ್ಲಿ 50...
ಸುದ್ದಿ

ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ನಲ್ಲಿ ಗ್ಲೋ ಫೆಸ್ಟ್ : ಡಿ.23 ರಿಂದ ಜ.26ವರೆಗೆ ವೈವಿಧ್ಯಮಯ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆಯಾಗಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ನಲ್ಲಿ ಡಿ.23 ರಿಂದ ಜ.26ವರೆಗೆ ವೈವಿಧ್ಯಮಯ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ "ಗ್ಲೋ ಫೆಸ್ಟ್" ಕಾರ್ಯಕ್ರಮ ನಡೆಯಲಿದೆ. ಡಿ.23ರಂದು "ಗ್ಲೋ ಫೆಸ್ಟ್" ಕಾರ್ಯಕ್ರಮವನ್ನು ದರ್ಬೆ ಗಣೇಶ್ ಟ್ರೇರ‍್ಸ್ ನ ಮಾಲಕರಾದ ವಾಮನ್ ಪೈಯವರ ಪತ್ನಿ ಶ್ರೀಮತಿ ಅನುರಾಧ ವಾಮನ್ ಪೈಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿವೇಕಾನಂದ ಸ್ನಾತಕೋತ್ತರ ಕಾಲೇಜಿನ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಹಿರಿಯರ ಪ್ರತಿಷ್ಠಾನದ ವಾರ್ಷಿಕೋತ್ಸವ ;ಸಂಸ್ಕೃತಿ ಅರಿವು ಮೂಡಿಸುವ ಕೆಲಸವಾಗಲಿ : ಎಡನೀರು ಶ್ರೀಗಳು -ಕಹಳೆ ನ್ಯೂಸ್

ಪುತ್ತೂರು: ಸಮಾಜದ ಮುಖ್ಯವಾಹಿನಿಯಾದ ಯುವ ಜನಾಂಗವು ಸಂಸ್ಕೃತಿ ಯಿಂದ ವಿಮುಖವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹಿರಿಯರಿಗಿದೆ. ಹಿರಿಯರು ಯುವಕರಿಗೆ ನಮ್ಮ ಭಾರತೀಯ ಸಂಸ್ಕೃತಿಯ ಅರಿವು ಮೂಡಿಸಬೇಕು. ಮರೆಯಾಗುತ್ತಿರುವ ಸಂಸ್ಕಾರಗಳನ್ನು ಮರುಕಳಿಸುವಂತೆ ಮಾಡಲು ಸಾಧ್ಯವೆಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದರು. ಅವರು ಪುತ್ತೂರಿನ ಕಲ್ಲೇಗ ಭಾರತ ಮಾತಾ ಸಮುದಾಯ ಭವನದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು....
ಉಡುಪಿಕುಂದಾಪುರಸುದ್ದಿ

ಕೇಂದ್ರದ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಾಪಸ್ಸಾಗಲಿ – ಚಂದ್ರಶೇಖರ್ ವಿ-ಕಹಳೆ ನ್ಯೂಸ್

ಕುಂದಾಪುರ: ಕಾರ್ಮಿಕ ವರ್ಗಕ್ಕೆ ಮಾರಕವಾದ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಕೇಂದ್ರ ಸರಕಾರ ಕೈ ಬಿಡಬೇಕು ಎಂಬುದಾಗಿ ಸಿಐಟಿಯು ಕುಂದಾಪುರ ತಾಲೂಕು ಸಂಚಾಲಕರಾದ ಚಂದ್ರಶೇಖರ್ ವಿ ಇಂದಿಲ್ಲಿ ಹೇಳಿದರು. ಅವರು ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಸರಕಾರ ಶ್ರೀಮಂತ ಉದ್ದಿಮೆದಾರರ ಪರವಾದ ನೀತಿಗಳು ಕಾರ್ಮಿಕರ ಶೋಷಣೆಯನ್ನು ಹೆಚ್ಚಿಸುವುದಾಗಿದೆ ಕಿರು ಕೈಗಾರಿಕೆಗಳಿಗೆ ಯಾವುದೇ ರಕ್ಷಣೆ ಇಲ್ಲವಾಗಿದೆ, ಅದನ್ನೇ ಅವಲಂಬಿಸಿದ ಕಾರ್ಮಿಕರು ಬೀದಿಗೆ ಬೀಳುತ್ತಿದ್ದಾರೆ. ಉಡುಪಿ...
ಅಂತಾರಾಷ್ಟ್ರೀಯವಾಣಿಜ್ಯಸುದ್ದಿ

ಆಹಾರ ಉತ್ಪನ್ನಗಳ ಪೂರೈಕೆಗೆ ಭಾರತದ ಮುಂದೆ ಮಂಡಿಯೂರಿದ ಬಾಂಗ್ಲಾ.! – ಕಹಳೆ ನ್ಯೂಸ್

ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ಚೀನಾ, ಪಾಕಿಸ್ತಾನದಂತಹ ದೇಶಗಳು ಹತ್ತಿರವಾಗುತ್ತಿದೆ, ಅಲ್ಲದೇ ಭಾರತದೊಂದಿಗೆ ಸಂಬಂಧ ಕೂಡ ಬಿರುಕು ಬಿಡುತ್ತದೆ, ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಬಾಂಗ್ಲಾ ಭಾರತದ ಎದುರು ಮಂಡಿಯುರಿದ್ದು, ಸಹಾಯ ಮಾಡುವಂತೆ ಅಂಗಲಾಚುತ್ತಿದ್ದಾರೆ. ಸರ್ಕಾರ ಪತನಗೊಂಡ ಬಳಿಕ ಬಾಂಗ್ಲಾ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಆಹಾರ ಉತ್ಪನ್ನಗಳ ಪೂರೈಕೆ, ಹಣದುಬ್ಬರ ಕಾರಣದಿಂದ ಒಂದು ಹೊತ್ತು ಊಟಕ್ಕೂ ಪರದಾಡುವಂತಾಗಿದೆ. ಈ ಹಿನ್ನಲೆ ನಮಗೆ ಸಹಾಯ ಮಾಡಿ ಎಂದು ಭಾರತದ ಮುಂದೆ ಬಾಂಗ್ಲಾದೇಶ ಅಂಗಲಾಚಿ ನಿಂತಿದೆ....
ಕ್ರೈಮ್ರಾಜ್ಯಸುದ್ದಿ

ಬಲವಂತವಾಗಿ ಮತಾಂತರ ;ಲವ್ ಜಿಹಾದ್‌ಗೆ ಯುವತಿ ಬಲಿ -ಕಹಳೆ ನ್ಯೂಸ್

ಉತ್ತರ ಪ್ರದೇಶ- ಗಾಜಿಯಾಬಾದ್ ಜಿಲ್ಲೆಯಲ್ಲಿ ಲವ್ ಜಿಹಾದ್‌ಗೆ ಬಲಿಯಾದ ಯುವತಿ. ಕವಿನಗರದ ಫರಾಜ್ ಅತ್ತಾರ ಎಂಬ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಪ್ರೀತಿ ಗೀತಿ ಅಂತ ಯಾಮಾರಿಸಿ ನಿರಂತರವಾಗಿ ದೈಹಿಕ ಸಂಪರ್ಕ ಹೊಂದಿದ್ದ. ಮತ್ತು ಆಕೆಯನ್ನು ಬಲವಂತವಾಗಿ ಮತಾಂತರಿಸಿದ್ದಾನೆ. ಫರಾಜ್ ಆಕೆಯಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿ ವಂಚಿಸಿದ್ದನು. ಅವನು ಯುವತಿಗೆ ದೈಹಿಕ, ಮಾನಸಿಕ ಹಾಗೂ ಆರ್ಥಿಕವಾಗಿ ಕಿರುಕುಳ ನೀಡಿದ್ದನು. ಇದರಿಂದ ಮಾನಸಿಕವಾಗಿನೊಂದ ಯುವತಿ ತನ್ನ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು...
1 34 35 36 37 38 2,747
Page 36 of 2747