ಮಂಗಳೂರು ಸೋಮೇಶ್ವರ ಕಡಲ ತೀರದಲ್ಲಿ ಸಮುದ್ರಕ್ಕೆ ಸ್ನಾನಕ್ಕೆ ಇಳಿದಿದ್ದ ದೇರೆಬೈಲ್ ನ ಮಹಿಳೆ ಸಾವು ; ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಂಡಿದ್ದಾಗ ದುರ್ಘಟನೆ – ಕಹಳೆ ನ್ಯೂಸ್
ಮಂಗಳೂರು : ಸಮುದ್ರಕ್ಕೆ ಸ್ನಾನಕ್ಕೆ ಇಳಿದಿದ್ದ ಮಹಿಳೆ ಸಾವಿಗೀಡಾಗಿರುವ ಘಟನೆ ಮಂಗಳೂರು (Mangaluru) ಹೊರವಲಯದ ಸೋಮೇಶ್ವರ ಕಡಲ ತೀರದಲ್ಲಿ ನಡೆದಿದೆ. ದೇರೆಬೈಲ್ ನಿವಾಸಿ ಉಷಾ (72) ಮೃತ ಮಹಿಳೆ. ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಂಡು ಸಮುದ್ರಕ್ಕೆ ಸ್ನಾನಕ್ಕಿಳಿದಿದ್ದರು. ಇತ್ತೀಚೆಗೆ ತಂಗಿ ನಿಶಾ ಭಂಡಾರಿ ಅವರ ಪತಿ ಕರುಣಾಕರ ಭಂಡಾರಿ ನಿಧನರಾಗಿದ್ದರು. ಮೃತ ಕರುಣಾಕರ ಭಂಡಾರಿಯ ಪಿಂಡ ಪ್ರದಾನ ವಿಧಿಯಲ್ಲಿ ಉಷಾ ಭಾಗವಹಿಸಿದ್ದರು. ಪುರೋಹಿತರು ಸಮುದ್ರ ತೀರದಲ್ಲಿ ಪಿಂಡ...