ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ಜೆಸಿಐ ಬಂಟ್ವಾಳದ 2025ನೇ ಸಾಲಿನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ – ಕಹಳೆ ನ್ಯೂಸ್
ಬಂಟ್ವಾಳ: ಜೆಸಿಐ ಬಂಟ್ವಾಳ ಇದರ 2025ನೇ ಸಾಲಿನ ಅಧ್ಯಕ್ಷ ಗಣೇಶ್ ಕೆ. ಕುಲಾಲ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು. ನೂತನ ತಂಡವನ್ನು ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಉದ್ಘಾಟಿಸಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಜೆಸಿಐ ಭಾರತದ ಎಲ್ಲಾ ಘಟಕಗಳು ಮೌನವಹಿಸಿದ್ದಾಗ ವಲಯ 15 ಸದ್ದು ಮಾಡುತ್ತಿತ್ತು. ಈ ಸಂದರ್ಭ ವಲಯಕ್ಕೆ ಬೆನ್ನಲುಬಾಗಿ ನಿಂತು ಕಾರ್ಯಕ್ರಮ ಸಂಘಟಿಸಿದ ಕೀರ್ತಿ ಜೆಸಿಐ ಬಂಟ್ವಾಳಕ್ಕೆ ಸಲ್ಲುತ್ತದೆ...