ಭವಿಷ್ಯದ ಕನಸು ಯುವ ಜನತೆಯ ಮನದಲ್ಲಿ ಜಾಗೃತವಾಗಲಿ – ರಾಜೇಶ್ ಪದ್ಮಾರ್-ಕಹಳೆ ನ್ಯೂಸ್
ಪುತ್ತೂರು, : ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ದಿನಗಳು ಮಹತ್ತರ ಪಾತ್ರ ವಹಿಸುತ್ತದೆ. ಇದು ಸಮಯ ಕಳೆಯುವ ವಯಸ್ಸಲ್ಲ ಸಾಧಿಸುವ ವಯಸ್ಸು. ವಿದ್ಯಾರ್ಥಿಗಳು ಅಂಕ ಪಡೆಯುವ ಉದ್ದೇಶ ಹೊಂದಿದರೆ ಸಾಲದು, ಪ್ರತಿಭೆ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಪಡೆದುಕೊಳ್ಳುವ ಅಗತ್ಯವಿದೆ. ಅಂತಹ ಶಿಕ್ಷಣವನ್ನು ಒದಗಿಸುವಲ್ಲಿ ವಿವೇಕಾನಂದ ಕಾಲೇಜು ಸುಮಾರು ಆರು ದಶಕಗಳಿಂದ ತೊಡಗಿಸಿಕೊಂಡಿರುವುದುಪ್ರಶAಸನೀಯ. ಇಂದಿನ ಯುವಜನತೆ ವರ್ತಮಾನದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಹಾಗೂ ಅದನ್ನು ಯಾವ ರೀತಿ ಬಗೆಹರಿಸಬೇಕು ಎಂಬುದನ್ನು ಗಮನಿಸಬೇಕು,...