I Love You -2 ಎನ್ನುತ್ತಾ ಇಬ್ಬರು ಯುವತಿಯರನ್ನು ಮದುವೆಯಾದ ಯುವಕ-ಕಹಳೆ ನ್ಯೂಸ್
ತೆಲಂಗಾಣ: ಇಬ್ಬರು ಯುವತಿಯರ ಪ್ರೀತಿಯಲ್ಲಿ ಬಿದ್ದ ಯುವಕನೊಬ್ಬ ನಾನು ಇಬ್ಬರನ್ನೂ ಪ್ರೀತಿಸುತ್ತೇನೆಂದು ಹೇಳಿ ಯುವಕನೋರ್ವ ತಾನು ಪ್ರೀತಿಸಿದ ಇಬ್ಬರು ಯುವತಿಯರನ್ನೂ ಕುಟುಂಬದ ಆಶೀರ್ವಾದದೊಂದಿಗೆ ಒಂದೇ ಮಂಟಪದಲ್ಲಿ ಮದುವೆಯಾದ ಅಪರೂಪದ ಘಟನೆ ತೆಲಂಗಾಣದ ಲಿಂಗಪುರ ತಾಲೂಕಿನ ಗುಮ್ನೂರ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯುವಕ ಸೂರ್ಯದೇವ್ ಕುಟುಂಬ ಮತ್ತು ಸ್ಥಳೀಯ ಸಮುದಾಯದ ಸಂಪೂರ್ಣ ಬೆಂಬಲದೊಂದಿಗೆ ಇಬ್ಬರು ಯುವತಿಯರಿಗೆ ಮಾಂಗಲ್ಯಧಾರಣೆ ಮಾಡಿದ್ದಾನೆ. ಸೂರ್ಯದೇವ್ ಅಕ್ಕಪಕ್ಕದ ಗ್ರಾಮಗಳ ಇಬ್ಬರು ಯುವತಿಯರಾದ ಲಾಲ್‌ದೇವಿ ಮತ್ತು ಜಲಕರ್ ದೇವಿ...