ಡಿ.1ರಿಂದ ನಗರಸಭೆ ಕುಡಿಯುವ ನೀರಿನ ದರದಲ್ಲಿ ಶೇ. 18 ರಿಂದ ಶೇ. 25 ರ ವರೆಗೆ ಕಡಿತ ಜಾರಿ : ಯಶ್ ಪಾಲ್ ಸುವರ್ಣ-ಕಹಳೆ ನ್ಯೂಸ್
ಉಡುಪಿ : ನಗರಸಭೆ ಗೃಹ ಬಳಕೆ , ವಾಣಿಜ್ಯ, ಕೈಗಾರಿಕಾ ಸಂಪರ್ಕದ ಕುಡಿಯುವ ನೀರಿನ ದರದಲ್ಲಿ ಕಡಿತಗೊಳಿಸಲಾಗಿದ್ದು, ಡಿ.1 ರಿಂದ ಜಾರಿಯಾಗಲಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹಾಗೂ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ ತಿಳಿಸಿದ್ದಾರೆ. ನಗರಸಭೆ ಆಡಳಿತಾಧಿಕಾರಿ ಅವಧಿಯಲ್ಲಿ ಅವೈಜ್ಞಾನಿಕ ಕುಡಿಯುವ ನೀರಿನ ದರ ಏರಿಕೆಯಿಂದ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗಿರುವ ಹಿನ್ನಲೆಯಲ್ಲಿ ಉಡುಪಿ ಜನತೆಯ ಹಿತದೃಷ್ಟಿಯಿಂದ ಗೃಹ ಬಳಕೆಯ ಸಂಪರ್ಕಕ್ಕೆ ನೀರಿನ ಬಳಕೆಗೆ ಅನುಗುಣವಾಗಿ...