Saturday, January 18, 2025

ಹೆಚ್ಚಿನ ಸುದ್ದಿ

ಉಡುಪಿಜಿಲ್ಲೆಸುದ್ದಿಹೆಚ್ಚಿನ ಸುದ್ದಿ

ಗೋವಿನ ಕೆಚ್ಚಲು ಕೆತ್ತಿದ ಪ್ರಕರಣಕ್ಕೆ ಪೇಜಾವರ ಶ್ರೀ ದಿಗ್ಭ್ರಮೆ  ; ಆಮರಣಾಂತ ಉಪವಾಸದ ಎಚ್ಚರಿಕೆ-ಕಹಳೆ ನ್ಯೂಸ್

ಉಡುಪಿ : ಚಾಮರಾಜನಗರದಲ್ಲಿ ದೇಶವೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ನಡೆದಿರುವ ಗೋವಿನ ಕೆಚ್ಚಲು ಸೀಳಿದ ಭೀಭತ್ಸ ಕೃತ್ಯಕ್ಕೆ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಬಗ್ಗೆ ತಿಳಿದ ತಕ್ಷಣ ..ಹ್ಞಾಂ ...ಅಯ್ಯೋ ...ರಾಮಾ....ಗೋವಿನ ಮೇಲಿನ ಕ್ರೌರ್ಯಕ್ಕೆ ಯಾವ ಅಂತ್ಯವೂ ಶಿಕ್ಷೆಯೂ ಈ ನೆಲದಲ್ಲಿ ಇಲ್ಲದಾಯಿತೇ ಎಂದು ಮಮ್ಮಲ ಮರುಗಿದ್ದಾರೆ . ಬಹುಸಂಖ್ಯಾತರಾಗಿದ್ದೂ ಜಾತ್ಯತೀತ ನ್ಯಾಯದ ನೆಪದಲ್ಲಿ ನಮ್ಮ ಭಾವನೆ ಶ್ರದ್ಧೆಗಳಿಗೆ ಕೊಡಲಿ ಏಟು...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿಹೆಚ್ಚಿನ ಸುದ್ದಿ

ಮಂಗಳೂರಿನಲ್ಲಿ ಇಂಧನ ಭದ್ರತಾ ಶೃಂಗಸಭೆ ಆಯೋಜಿಸಿ, ನನ್ನ ಪೂರ್ಣ ಬೆಂಬಲವಿದೆ ಸಂಸದ ಕ್ಯಾ. ಚೌಟ ಅವರಿಗೆ ಸಲಹೆ ನೀಡಿದ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ-ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಪ್ರವಾಸದಲ್ಲಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಂಗಳೂರಿನಲ್ಲಿ ಇಂಧನ ಭದ್ರತಾ ಸಮ್ಮಿಟ್ ಆಯೋಜಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಸಲಹೆ ನೀಡಿದ್ದು, ಇದಕ್ಕೆ ತಮ್ಮ ಕಡೆಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆಯುತ್ತಿರುವ ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿದ್ದ ಅವರಿಗೆ, ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿನ ಸಾಮರ್ಥ್ಯವನ್ನು...
ಉಡುಪಿಜಿಲ್ಲೆಸುದ್ದಿಹೆಚ್ಚಿನ ಸುದ್ದಿ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹೊಸ ವರ್ಷವನ್ನು ಭವ್ಯ ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ಆಚರಣೆ . ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧಕರಿಗೆ ಗೌರವ-ಕಹಳೆ ನ್ಯೂಸ್

ಮಣಿಪಾಲ : ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ((MAHE) ತನ್ನ ವಾರ್ಷಿಕ ಹೊಸ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜನವರಿ 11, 2025 ರ ಶನಿವಾರದಂದು ಸುಂದರವಾದ ಕೆಎಂಸಿ ಗ್ರೀನ್ಸ್ನಲ್ಲಿ ಆಯೋಜಿಸಿತ್ತು. ಶ್ರೇಷ್ಠತೆ, ಸಮರ್ಪಣೆ ಮತ್ತು ಪ್ರಭಾವವನ್ನು ಆಚರಿಸಲು ವಿಶೇಷ ಅತಿಥಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ವಿಶಾಲ ಸಮುದಾಯವನ್ನು ಒಟ್ಟುಗೂಡಿಸುವ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೈದ ಸಾಧಕರನ್ನು ಗೌರವಿಸಲಾಯಿತು. ಈ ವರ್ಷದ ಸಮಾರಂಭವು ತಮ್ಮ ತಮ್ಮ ಕ್ಷೇತ್ರಗಳು ಮತ್ತು ಸಮಾಜಕ್ಕೆ ಅತ್ಯುತ್ತಮ...
ಅಂತಾರಾಷ್ಟ್ರೀಯದೆಹಲಿಸುದ್ದಿಹೆಚ್ಚಿನ ಸುದ್ದಿ

ರಾಮಮಂದಿರ ಪ್ರತಿಷ್ಟಾಪನೆಗೆ 1 ವರ್ಷ; ವಾರ್ಷಿಕೋತ್ಸವಕ್ಕೆ ಪ್ರಧಾನಿ ಮೋದಿ ಶುಭಾಶಯ-ಕಹಳೆ ನ್ಯೂಸ್

ನವದೆಹಲಿ: ಉತ್ತರಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮಮೂರ್ತಿ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜನರಿಗೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಮಮಂದಿರ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮದ ದೊಡ್ಡ ಪರಂಪರೆಯಾಗಿದೆ ಎಂದು ಬಣ್ಣಿಸಿದ್ದಾರೆ. ಈ ಪವಿತ್ರ ದೇವಾಲಯ ಶತಮಾನಗಳ ತ್ಯಾಗ, ಹೋರಾಟ ಮತ್ತು ಭಕ್ತಿಯಿಂದ ನಿರ್ಮಿತವಾಗಿದೆ ಎಂದು ಹೇಳಿದ್ದಾರೆ. ಇಂದಿನಿAದ (ಶನಿವಾರ) ಆರಂಭವಾಗಿರುವ ವಾರ್ಷಿಕೋತ್ಸವ ಕಾರ್ಯಕ್ರಮ ಸೋಮವಾರದವರೆಗೂ ನಡೆಯಲಿದೆ....
ದೆಹಲಿಸುದ್ದಿಹೆಚ್ಚಿನ ಸುದ್ದಿ

ಇಸ್ರೋದ ನೂತನ ಅಧ್ಯಕ್ಷರಾಗಿ ಡಾ.ವಿ.ನಾರಾಯಣನ್ ನೇಮಕ -ಕಹಳೆ ನ್ಯೂಸ್

ನವದೆಹಲಿ: ಇಸ್ರೋದ ನೂತನ ಅಧ್ಯಕ್ಷರಾಗಿ ಡಾ.ವಿ.ನಾರಾಯಣನ್ ಅವರನ್ನು ನೇಮಕ ಮಾಡಲಾಗಿದೆ. ಅವರು ನೂತನ ಬಾಹ್ಯಾಕಾಶ ಕಾರ್ಯದರ್ಶಿಯೂ ಕಾರ್ಯನಿರ್ವಹಿಸಲಿದ್ದಾರೆ. ಪ್ರಸ್ತುತ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್‌ಪಿಎಸ್‌ಸಿ) ನಿರ್ದೇಶಕರಾಗಿರುವ ಡಾ. ನಾರಾಯಣನ್ ಅವರು ಇಸ್ರೋ ಹೊಸ ಅಧ್ಯಕ್ಷರಾಗಿ ಜನವರಿ 14 ರಿಂದ ಹಾಲಿ ಅಧ್ಯಕ್ಷ ಎಸ್. ಸೋಮನಾಥ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ನಿರ್ದೇಶಕ ವಿ. ನಾರಾಯಣನ್ ಅವರನ್ನು ಬಾಹ್ಯಾಕಾಶ ಇಲಾಖೆ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿಹೆಚ್ಚಿನ ಸುದ್ದಿ

ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ-ಕಹಳೆ ನ್ಯೂಸ್

ಮಂಗಳೂರು: ಕರಾವಳಿ ಉತ್ಸವದ ಪ್ರಯುಕ್ತ ಜಿಲ್ಲಾಡಳಿತವು ಮುಡಾ, ಎನ್‌ಎಂಪಿಟಿ ಹಾಗೂ ರೋಹನ್ ಕಾರ್ಪೊರೇಶನ್ ಸಹಭಾಗಿತ್ವದಲ್ಲಿ ಆಯೋಜಿಸಿರುವ ಬೀಚ್ ಉತ್ಸವ ತಣ್ಣೀರುಬಾವಿಯಲ್ಲಿ ಜ.11 ಮತ್ತು 12ರಂದು ಮರುನಿಗದಿಯಾಗಿದ್ದು ಸುರಕ್ಷತೆ-ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಬೀಚ್ ಉತ್ಸವ ಸಮಿತಿಯ ಅಧ್ಯಕ್ಷ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅವರು ಮಾತನಾಡಿ, ಬೀಚ್‌ನ ಶುಚಿತ್ವಕ್ಕೆ ಸಂಬAಧಿಸಿ ಮಹಾನಗರ ಪಾಲಿಕೆಯಿಂದ...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿಹೆಚ್ಚಿನ ಸುದ್ದಿ

ಮಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್-ಕಹಳೆ ನ್ಯೂಸ್

ಮಂಗಳೂರು: ದ.ಕ.ಜಿಲ್ಲಾ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಮಂಗಳವಾರ ಮಧ್ಯಾಹ್ನದ 1ಗಂಟೆ ಸುಮಾರಿಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಮಂಗಳವಾರ ಬೆಳಗ್ಗೆ ದೆಹಲಿಯಿಂದ ಪತ್ನಿ ಸಹಿತರಾಗಿ ಹೊರಟ ಅವರು ಮಧ್ಯಾಹ್ನ 1.05ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿದ್ದಾರೆ. ರಾಜ್ಯ ಸರಕಾರದ ಪರವಾಗಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಉಪರಾಷ್ಟ್ರಪತಿಯವರನ್ನು ಸ್ವಾಗತಿಸಿದರು. ಈ ವೇಳೆ ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಪೊಲೀಸ್ ಕಮಿಷನರ್ ಅನುಪಮ್...
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿಹೆಚ್ಚಿನ ಸುದ್ದಿ

ದ.ಕ.ಜಿಲ್ಲೆಯ ಇತಿಹಾಸದಲ್ಲಿ ಅಪರೂಪದ ಹೆರಿಗೆ; ನಾಲ್ವರು ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿ-ಕಹಳೆ ನ್ಯೂಸ್

ಮಂಗಳೂರು: ಮಹಿಳೆಯೊಬ್ಬರು ನಾಲ್ಕು ಶಿಶುಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತೆಲಂಗಾಣ ರಾಜ್ಯದ ಬಾನೋತ್ ರ‍್ಗಾ ಅವರು ನಾಲ್ವರು ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿ. ಈ ನಾಲ್ವರು ಶಿಶುಗಳ ಪೈಕಿ ಎರಡು ಗಂಡು, ಎರಡು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಆದರೆ 30 ವಾರಗಳ ಹೆರಿಗೆಯಾಗಿದ್ದು,...
1 2 3 132
Page 1 of 132