ದೇಶಾದ್ಯಂತ ವಾಹನಗಳಿಗೆ ಏಕರೂಪದ `ಪಿಯುಸಿ’ ಸರ್ಟಿಫಿಕೇಟ್ : ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ – ಕಹಳೆ ನ್ಯೂಸ್
ಹೊಸದಿಲ್ಲಿ: ದೇಶದ ಎಲ್ಲ ವ್ಯವಸ್ಥೆಗಳನ್ನು ತಂತ್ರಜ್ಞಾನದ ವ್ಯಾಪ್ತಿಗೆ ತರುತ್ತಿರುವ ಕೇಂದ್ರ ಸರಕಾರವು ಇನ್ನೊಂದು ಪ್ರಮುಖ ಹೆಜ್ಜೆ ಇರಿಸಿದೆ. ವಾಹನಗಳ ಹೊಗೆಯುಗುಳುವಿಕೆ ಮಟ್ಟದ ಪರೀಕ್ಷಾ ಪ್ರಮಾಣಪತ್ರ (ಪೊಲ್ಯೂಷನ್ ಅಂಡರ್ ಕಂಟ್ರೋಲ್-ಪಿಯುಸಿ)ವನ್ನು ದೇಶಾದ್ಯಂತ ಏಕರೂಪಗೊಳಿಸಲು ಚಿಂತನೆ ನಡೆಸಿದೆ. ಹಾಗೆಯೇ ಅದರಲ್ಲಿ ಕ್ಯುಆರ್ ಕೋಡ್ ಅಳವಡಿಸಲಾಗುತ್ತದೆ. ಅದನ್ನು ಸ್ಕ್ಯಾನ್ ಮಾಡಿದರೆ ವಾಹನದ ಮಾಲಕನ ವಿವರ, ಹೊಗೆ ಯುಗುಳುವಿಕೆ ಸ್ಥಿತಿಗತಿ ಮತ್ತಿತರ ಮಾಹಿತಿಗಳು ಸಿಗುತ್ತವೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಪ್ರಕಟನೆ ಹೊರಡಿಸಿ,...