ರಾಮಾಯಣ, ಮಹಾಭಾರತ ಕೇಳುತ್ತಾ ಬಾಲ್ಯ ಕಳೆದೆ- ಆತ್ಮಚರಿತ್ರೆಯಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಒಬಾಮಾ! – ಕಹಳೆ ನ್ಯೂಸ್
ವಾಷಿಂಗ್ಟನ್: ಹಿಂದೂಗಳ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಕೇಳುತ್ತಾ ಇಂಡೊನೇಷ್ಯಾದಲ್ಲಿ ತನ್ನ ಬಾಲ್ಯವನ್ನು ಕಳೆದರಿಂದ ಭಾರತಕ್ಕೆ ಯಾವಾಗಲೂ ವಿಶೇಷವಾದ ಸ್ಥಾನವಿರುವುದಾಗಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ವಿಶ್ವದ ಜನಸಂಖ್ಯೆಯ ಆರನೇ ಒಂದು ಭಾಗದಷ್ಟು ಗಾತ್ರವಿರುವ, ಅಂದಾಜು ಎರಡು ಸಾವಿರ ವಿಭಿನ್ನ ಜನಾಂಗೀಯ ಗುಂಪುಗಳು, ಏಳುನೂರಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವವರು ಭಾರತದಲ್ಲಿರುವುದಾಗಿ ' ಎ ಪ್ರಾಮಿಸ್ಡ್ ಲ್ಯಾಂಡ್ 'ಆತ್ಮಚರಿತ್ರೆಯಲ್ಲಿ ಒಬಾಮಾ ಭಾರತದ ಬಗ್ಗೆಗಿನ ಮೋಹವನ್ನು ಬರೆದುಕೊಂಡಿದ್ದಾರೆ. 2010ರಲ್ಲಿ...