ನಾಳೆ ಇಟಾಲಿ ಪ್ರಧಾನಿ ಜೊತೆ ಮೋದಿ ವರ್ಚುಯಲ್ ದ್ವಿಪಕ್ಷೀಯ ಶೃಂಗಸಭೆ – ಕಹಳೆ ನ್ಯೂಸ್
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಾಲಿಯನ್ ಪ್ರಧಾನಿ ಪ್ರೊಫೆಸರ್ ಗೈಸೆಪೆ ಕಾಂಟೆ ಅವರು ಶುಕ್ರವಾರ ವರ್ಚುಯಲ್ ದ್ವಿಪಕ್ಷೀಯ ಶೃಂಗಸಭೆ ನಡೆಸಲು ಸಜ್ಜಾಗಿದ್ದಾರೆ. 'ಶೃಂಗಸಭೆಯು ಉಭಯ ನಾಯಕರಿಗೆ ದ್ವಿಪಕ್ಷೀಯ ಸಂಬಂಧಗಳ ವಿಶಾಲ ಚೌಕಟ್ಟನ್ನು ಸಮಗ್ರವಾಗಿ ಪರಿಶೀಲಿಸಲು ಮತ್ತು ಪರಸ್ಪರ ಕಾಳಜಿಯ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡುತ್ತದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಭಾರತವು ಇಟಲಿಯನ್ನು ಯುರೋಪಿಯನ್...