ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಸಮಸ್ಯೆಗೆ ಪರಿಹಾರ – ಕಹಳೆ ನ್ಯೂಸ್
ನವದೆಹಲಿ: ಈಗಂತೂ ಸರ್ಕಾರಿ ಯೋಜನೆ ಸೌಲಭ್ಯ ಪಡೆಯುವುದು ಸೇರಿದಂತೆ ಅನೇಕ ಕೆಲಸಗಳಿಗೆ ಆಧಾರ್ ಕಾರ್ಡ್ ಅನಿವಾರ್ಯವೆನ್ನುವಂತಾಗಿದೆ. ಕೆಲವೊಮ್ಮೆ ಆಧಾರ್ ಕಾರ್ಡ್ ಗಳಲ್ಲಿ ಖಾಯಂ ವಿಳಾಸ ನೀಡಿದಾಗ ಸಮಸ್ಯೆಯಾಗುತ್ತದೆ. ಇನ್ನು ಮುಂದೆ ಆಧಾರ್ ಕಾರ್ಡ್ ಗೆ ಬಾಡಿಗೆ ಮನೆ ವಿಳಾಸ ಕೂಡ ನೀಡಬಹುದಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಬಾಡಿಗೆದಾರರ ವಿಳಾಸ ನವೀಕರಿಸಲು ಹೊಸ ಪ್ರಕ್ರಿಯೆಯನ್ನು ಪರಿಚಯಿಸಿದ್ದು ಬಾಡಿಗೆ ಒಪ್ಪಂದ ಬಳಸಿಕೊಂಡು ಆಧಾರ್ ಕಾರ್ಡ್ ನಲ್ಲಿ ವಿಳಾಸವನ್ನು ಬದಲಿಸಬಹುದಾಗಿದೆ. ಬಾಡಿಗೆ...