ಕೇವಲ ‘ಎರಡು ವಾರದ ಮಗು’ವಿನೊಂದಿಗೆ ‘ಕೊರೋನಾ ಕರ್ತವ್ಯ’ಕ್ಕೆ ಹಾಜರಾದ ‘ಐಎಎಸ್ ಅಧಿಕಾರಿ’-ಕಹಳೆ ನ್ಯೂಸ್
ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡೋ ಮಹಿಳಾ ಸಿಬ್ಬಂದಿಗೆ 6 ತಿಂಗಳ ಹೆರಿಗೆ ರಜೆ ನೀಡಲಾಗುತ್ತೆ. ಆದರೆ ಉತ್ತರ ಪ್ರದೇಶದ ಸರ್ಕಾರಿ ಮಹಿಳಾ ಅಧಿಕಾರಿ ಮಾತ್ರ ಹೆರಿಗೆಯಾದ ಮೂರೇ ವಾರದಲ್ಲಿ ಕಚೇರಿಗೆ ಹಾಜರಾಗಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಮೂರು ವಾರದ ಮಗುವನ್ನ ಕಚೇರಿಗೆ ಕರೆದುಕೊಂಡು ಬರುವ ಮಹಿಳಾ ಉಪವಿಭಾಗದ ಮ್ಯಾಜಿಸ್ಟ್ರೇಟ್ ಸೌಮ್ಯ ಪಾಂಡೆ ಕಚೇರಿ ಕೆಲಸದ ಜೊತೆ ಜೊತೆಯೇ ಮಗುವಿನ ಆರೈಕೆಯನ್ನೂ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಮೋದಿ ನಗರದಲ್ಲಿರುವ ಸರ್ಕಾರಿ...